ಹೊಸದಿಗಂತ ವರದಿ, ಉಡುಪಿ:
ವಿಶ್ವ ಹಿಂದು ಪರಿಷದ್ ನ 60 ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಯುತ್ತಿರುವ ಹಿಂದು ಸಮಾಜೋತ್ಸವಕ್ಕೆ ನಗರದಲ್ಲಿ ಕೇಸರಿ ಪತಾಕೆ ಮತ್ತು ಧ್ವಜವನ್ನು ಹಾಕಲು ಇಲಾಖೆ 10 & 20 ಲಕ್ಷದ ಬಾಂಡ್ ಬರೆಸಿಕೊಂಡಿದ್ದಾರೆ. 2024 ರಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯು ಭಗವಾಧ್ವಜ ಹಾಕಲಾಗುತ್ತದೆ. ಆಗ ಎಷ್ಟು ಲಕ್ಷದ ಬಾಂಡ್ ಬರೆಸಿಕೊಳ್ಳುತ್ತೀರಿ ಎಂದು ವಿಹಿಂಪ ಪ್ರ.ಕಾರ್ಯದರ್ಶಿ ದಿನೇಶ್ ಮೆಂಡನ್ ಪ್ರಶ್ನಿಸಿದರು.
ಅವರು ಮಂಗಳವಾರ, ಉಡುಪಿಯ ಎಮ್.ಜಿ.ಎಮ್ ಮೈದಾನದಲ್ಲಿ ವಿಹಿಂಪ, ಬಜರಂಗದಳ ಉಡುಪಿ ಜಿಲ್ಲೆ ವತಿಯಿಂದ, ಸ್ವರ್ಗೀಯ ಕೇಶವ ಹೆಗಡೆ ವೇದಿಕೆಯಲ್ಲಿ ನಡೆದ ಹಿಂದು ಸಮಾಜೋತ್ಸವವನ್ನು ಉದ್ದೇಶಿಸಿ ಮಾತನಾಡಿದರು.
2024 ಕ್ಕೆ ಈ ದೇಶದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳುತ್ತದೆ. ಆಗ ನಗರ ಮಾತ್ರವಲ್ಲ, ಪ್ರತಿಯೊಬ್ಬರ ಮನೆಯಲ್ಲೂ ಭಗವಾಧ್ವಜ ಹಾರಾಡುತ್ತದೆ. ಆಗ ಇಲಾಖೆ ಹಿಂದುಗಳ ಮನೆ ಮನೆಗೆ ಭೇಟಿ ನೀಡಿ 10 ಲಕ್ಷ ಅಲ್ಲ, 10 ಕೋಟಿಯ ಬಾಂಡ್ ಬರೆಸಿಕೊಂಡರೂ ನಾವು ಸಹಿ ಹಾಕಲು ಸಿದ್ದರಿದ್ದೇವೆ. ಮುಂದೊಂದು ದಿನ ಅಖಂಡ ಭಾರತ ಕೇಸರಿಮಯ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.