ಮೆಂಡಿಸ್, ಸಮರವಿಕ್ರಮ ಶತಕದಾಟ: ಪಾಕ್ ಗೆಲುವಿಗೆ 345 ರನ್‌ಗಳ ಟಾರ್ಗೆಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ ಶತಕದಾಟದಿಂದ ಲಂಕಾ ಪಾಕ್ ವಿರುದ್ಧ 344 ರನ್‌ಗಳ ಬೃಹತ್​ ಮೊತ್ತ ಕಲೆಹಾಕಿತು.
ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಲಂಕಾ ಪಾಕಿಸ್ತಾನದ ಬೌಲರ್​ಗಳನ್ನು ಚೆಂಡಾಡಿದರು.

ಎರಡನೇ ಓವರ್​ನಲ್ಲಿ ಹಸನ್​ ಅಲಿ ಕುಸಾಲ್​ ಪೆರೇರಾ (0) ಅವರ ವಿಕೆಟ್​ ಉರುಳಿಸಿ ಲಂಕಾಗೆ ಶಾಕ್​ ನೀಡಿದರು. ಆದರೆ, ಎರಡನೇ ವಿಕೆಟ್​ಗೆ ಪಾತುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡಿಸ್ ಶತಕದ ಜೊತೆಯಾಟವಾಡಿದರು. ಅರ್ಧಶತಕ ಗಳಿಸಿದ ನಿಸ್ಸಾಂಕ (51) ವಿಕೆಟ್​ ಕೊಟ್ಟು ಪೆವಿಲಿಯನ್​ಗೆ ಮರಳಿದರೆ, ನಂತರ ಬಂದ ಸದೀರ ಸಮರವಿಕ್ರಮ ಪಿಚ್​ಗೆ ಹೊಂದಿಕೊಂಡಿದ್ದ ಮೆಂಡಿಸ್ 111 ರನ್​ಗಳ ಪಾಲುದಾರಿಕೆ ಮಾಡಿದರು. ಕುಸಲ್ ಮೆಂಡಿಸ್ ಏಕದಿನ ಕ್ರಿಕೆಟ್​ನ ತಮ್ಮ 3ನೇ ಶತಕ ದಾಖಲಿಸಿದರು. 77 ಬಾಲ್​ನಲ್ಲಿ 14 ಬೌಂಡರಿ ಮತ್ತು 6 ಸಿಕ್ಸ್​ನಿಂದ 122 ರನ್‌ ಗಳಿಸಿ ವಿಕೆಟ್​ ಕೊಟ್ಟರು.

ಸಮರವಿಕ್ರಮಏಕದಿನ ಕ್ರಿಕೆಟ್​ನ ಚೊಚ್ಚಲ ಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 89 ಬಾಲ್​ ಆಡಿದ ಅವರು 11 ಬೌಂಡರಿ ಮತ್ತು 2 ಸಿಕ್ಸ್​ನಿಂದ 108 ರನ್​ ಕಲೆಹಾಕಿ ವಿಕೆಟ್​ ಕೈಚೆಲ್ಲಿದರು. ನಂತರ ಚರಿತ್ ಅಸಲಂಕಾ (1), ಧನಂಜಯ ಡಿ ಸಿಲ್ವಾ (25), ದಸುನ್ ಶನಕ (12), ಮಹೇಶ್ ತೀಕ್ಷಣ (0) ಮತ್ತು ದುನಿತ್ ವೆಲ್ಲಲಾಗೆ (10) ಗಮನಾರ್ಹ ಇನ್ನಿಂಗ್ಸ್​ ಕಟ್ಟಲಿಲ್ಲ. 50 ಓವರ್‌ಗಳ​ ಮುಕ್ತಾಯಕ್ಕೆ ಶ್ರೀಲಂಕಾ 9 ವಿಕೆಟ್​ ಕಳೆದುಕೊಂಡು 344 ರನ್​ ಕಲೆಹಾಕಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!