ಹೊಸದಿಗಂತ ವರದಿ ದಾವಣಗೆರೆ :
ಕುಡಿದ ಅಮಲಿನಲ್ಲಿ ಮಗನೊಬ್ಬ ಜನ್ಮ ಕೊಟ್ಟ ತಾಯಿಯನ್ನೇ ಹೊಡೆದು ಕೊಂದಿರುವ ಘಟನೆ ತಾಲೂಕಿನ ನೇರ್ಲಿಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲೋಕೇಶ ನಾಯ್ಕ ತನ್ನ ತಾಯಿ ಶಾಂತಿಬಾಯಿ(70 ವರ್ಷ) ಎಂಬುವರನ್ನು ಹತ್ಯೆ ಮಾಡಿದ್ದಾನೆ. ಲೋಕೇಶ್ ಪತ್ನಿ ತವರುಮನೆಗೆ ಹೋಗಿದ್ದು, ಪ್ರತಿನಿತ್ಯವೂ ಕುಡಿದು ಬಂದು ತಾಯಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಸೋಮವಾರ ರಾತ್ರಿ ಕೂಡ ಕಂಠಪೂರ್ತಿ ಕುಡಿದು ಬಂದಿದ್ದ ವೇಳೆ ಕೈಗೆ ಸಿಕ್ಕ ಹೆಂಚಿನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಶಾಂತಿಬಾಯಿ ಮೃತಪಟ್ಟಿದ್ದಾರೆ. ಹಂತಕ ಲೋಕೇಶನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಾಯಕೊಂಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.