ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್(Bhupesh Baghel) ಕಾಂಗ್ರೆಸ್ನ ಪ್ರಮುಖ ಸಭೆಯೊಂದರಲ್ಲಿ ಕ್ಯಾಂಡಿಕ್ರಷ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಜೆಪಿ ಐಟಿ ಸೆಲ್ನ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದು, ಹೇಗೂ ಈ ಬಾರಿ ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸ್ಪಷ್ಟವಾದಂತಿದೆ ಹಾಗಾಗಿಯೇ ಸಭೆಯಲ್ಲಿ ಮುಖ್ಯಮಂತ್ರಿಗಳು ಕ್ಯಾಂಡ್ಕ್ರಷ್ ಆಡುತ್ತಿದ್ದರು ಎಂದು ಗೇಲಿ ಮಾಡಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸಿಎಂ ಪ್ರತಿಕ್ರಿಯಿಸಿದ್ದಾರೆ. ನಾನು ಗಿಲ್ಲಿ ದಾಂಡನ್ನೂ ಆಡುತ್ತೇನೆ, ಕ್ಯಾಂಡಿಕ್ರಷ್ನ್ನು ಆಡುತ್ತೇನೆ, ನಾನು ಲೆವೆಲ್ ಚೆನ್ನಾಗಿ ಪಾಸಾಗಿದ್ದೇನೆ, ಅದು ಇನ್ನು ಮುಂದೆ ಕೂಡ ಮುಂದುವರೆಯುತ್ತದೆ ಎಂದರು, ಯಾರಿಗೆ ಮತ ಹಾಕಬೇಕು ಹಾಕಬಾರದು ಎಂಬುದು ಛತ್ತೀಸ್ಗಢದ ಜನತೆಗೆ ತಿಳಿದಿದೆ ಎಂದು ಪ್ರತಿಕ್ರಿಯೆ ಮಾಡಿದ್ದಾರೆ.
ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ರಾಯ್ಪುರದಲ್ಲಿ ಮೊದಲು ಕಾಂಗ್ರೆಸ್ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಿತು.