ಕಲಬುರಗಿಯಲ್ಲಿ ಕೇಳಿಸಿತು ಬುಲ್ಡೋಜರ್ ಘರ್ಜನೆ

ಹೊಸದಿಗಂತ ವರದಿ,ಕಲಬುರಗಿ:

ನಗರದಲ್ಲಿ ಬೆಳ್ಳಂಬೆಳಗ್ಗೆ ಬುಲ್ಡೋಜರ್ ಸದ್ದು ಮಾಡಿದ್ದು, ಆಶ್ರಯ ಕಾಲೂನಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 40ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದ ಮನೆಗಳನ್ನ ಜಿಲ್ಲಾಡಳಿತ ನೆಲಸಮ ಮಾಡಿ ಬಿಸಿ ಮುಟ್ಟಿಸಿದೆ.

ಸರ್ವೇ ನಂಬರ್ 9/3 ವಾರ್ಡ್ ನಂಬರ್ 23 ರಲ್ಲಿ ಆಪರೇಷನ್ ಡೆಮಾಲಿಷ್ ಕಾರ್ಯಾಚರಣೆ ಮಾಡಲಾಗಿದ್ದು, ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ನೆಲೆಸಿದ್ದ ಪರಿಣಾಮ ನೆಲಸಮ ಮಾಡಲಾಗಿತ್ತು. ಗುರುವಾರ ಡೆಮಾಲಿಷ್ ಮಾಡುವ ಮೂಲಕ ಜಿಲ್ಲಾಡಳಿತ ಕ್ರಮಕೈಗೊಂಡಿದೆ.

ಇನ್ನೂ ನಮ್ಮ ಮನೆಗಳ ಮೇಲೆ ಏಕಾಏಕಿ ಬುಲ್ಡೋಜರ್ ಹತ್ತಿಸಿ ನೆಲಸಮ ಮಾಡಿ ನಮ್ಮನ್ನ ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂದು ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!