ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರಕಾರ ಬೆಂಗಳೂರಿನ 11 ಶಾಸಕರಿಗೆ ತಲಾ 40 ಕೋಟಿ ರೂ. ಅನುದಾನ (Fund) ಮಂಜೂರು ಮಾಡಲು ನಿರ್ಧರಿಸಿದೆ.
ಇತ್ತೀಚೆಗೆ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಬರಬೇಕಾದ ಅನುದಾನವನ್ನು ತಡೆ ಹಿಡಿಯಲಾಗಿದೆ. ಹೀಗಾದರೆ ನಾವು ಹೇಗೆ ಕೆಲಸ ಮಾಡುವುದು ಎಂದು ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿ ಉಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಸಂಸದ ಡಿಕೆ ಸುರೇಶ್ (DK Suresh) ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದರು.
ಇದರ ಬೆನ್ನಲ್ಲೇ ಇದೀಗ ಸರ್ಕಾರ ಬಿಜೆಪಿಯ 14 ಶಾಸಕರಲ್ಲಿ ಒಬ್ಬ ಶಾಸಕರನ್ನು ಹೊರತುಪಡಿಸಿ, ಉಳಿದ 13 ಕಮಲ ಶಾಸಕರಿಗೆ ಅನುದಾನ ನೀಡದೆ ಬರೀ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಿದ್ದು ಅಚ್ಚರಿ ಮೂಡಿಸಿದೆ.
ವರದಿಗಳ ಪ್ರಕಾರ, ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯ ಬಳಕೆಯಾಗದ ನಿಧಿಯಿಂದ ಒಟ್ಟು 480 ಕೋಟಿ ರೂ.ಗಳನ್ನು ಶಾಸಕರಿಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಯಶವಂಪುರ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಅವರಿಗೆ ಮಾತ್ರ ಅನುದಾನ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಉಳಿದಂತೆ ಕಾಂಗ್ರೆಸ್ ಸರ್ಕಾರ ಬಿಜೆಪಿಯ ಯಾವ ಕ್ಷೇತ್ರಕ್ಕೂ ಅನುದಾನ ನೀಡಿಲ್ಲ.
ಅನುದಾನ ಹಂಚಿಕೆ
ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ, ಕಾಂಗ್ರೆಸ್)
ಎಸಿ ಶ್ರೀನಿವಾಸ್ (ಪುಲಕೇಶಿನಗರ,ಕಾಂಗ್ರೆಸ್)
ಬೈರತಿ ಸುರೇಶ್ (ಹೆಬ್ಬಾಳ,ಕಾಂಗ್ರೆಸ್)
ರಾಮಲಿಂಗಾ ರೆಡ್ಡಿ (BTM ಲೇಔಟ್,ಕಾಂಗ್ರೆಸ್)
ಕೆಜೆ ಜಾರ್ಜ್ (ಸರ್ವಜ್ಞನಗರ,ಕಾಂಗ್ರೆಸ್)
ರಿಜ್ವಾನ್ ಅರ್ಷದ್ (ಶಿವಾಜಿನಗರ,ಕಾಂಗ್ರೆಸ್)
ಎನ್ಎ ಹರಿಸ್ (ಶಾಂತಿನಗರ,ಕಾಂಗ್ರೆಸ್)
ದಿನೇಶ್ ಗುಂಡೂರಾವ್ (ಗಾಂಧಿನಗರ,ಕಾಂಗ್ರೆಸ್)
ಪ್ರಿಯಾಕೃಷ್ಣ (ಗೋವಿಂದರಾಜನಗರ,ಕಾಂಗ್ರೆಸ್)
ಎಂ ಕೃಷ್ಣಪ್ಪ (ವಿಜಯನಗರ,ಕಾಂಗ್ರೆಸ್)
ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ,ಕಾಂಗ್ರೆಸ್)
ಎಸ್ ಟಿ ಸೋಮಶೇಖರ್ (ಯಶವಂತಪುರ,ಬಿಜೆಪಿ)