ಹೊಸದಿಗಂತ ವರದಿ, ಕೊಪ್ಪಳ:
ಬಿಜೆಪಿಯವರಿಗೆ ಐಟಿ , ಇಡಿ, ಸಿಬಿಐ ಬಿಟ್ಟರೆ ಬೇರೇನೂ ಇಲ್ಲ. ಬಿಜೆಪಿ ನಾಯಕರ ಮನೆ ಮೇಲೆ ದಾಳಿ ಯಾಕಾಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಪ್ರಶ್ನಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಮನೆಯಲ್ಲಿ ಏನೂ ಇಲ್ಲವಾ? ಹಿಂದಿನ ಸರ್ಕಾರದಲ್ಲಿ ಏನೇನು ತಿಂದಿದ್ದಾರೆ ಅನ್ನುವುದು ಜನರಿಗೆ ಗೊತ್ತಿದೆ. ದೆಹಲಿಯಲ್ಲಿ ಎಎಪಿ, ಕರ್ನಾಟಕದಲ್ಲಿ ಕಾಂಗ್ರೆಸ್, ಆಂಧ್ರದಲ್ಲಿ ಅವರಿಗೆ ಚಂದ್ರಬಾಬು ಕಾಣುತ್ತಾರೆ ಎಂದು ಆರೋಪಿಸಿದರು.