ಕೆಂಪೇಗೌಡ ಏರ್ಪೋರ್ಟ್ ನಲ್ಲಿ 1 ಕೋಟಿ ಮೌಲ್ಯದ ಚಿನ್ನ ಜಪ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಕೆಂಪೇಗೌಡ ಏರ್ಪೋರ್ಟ್ ನ ಏರ್ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮೂವರು ಪ್ರಯಾಣಿಕರಿಂದ 1 ಕೋಟಿ ಮೌಲ್ಯದ ಸುಮಾರು 1.7 ಕೆಜಿ ಚಿನ್ನಾಭರಣಗಳು ಹಾಗೂ ನಾಲ್ಕು ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಸಿಂಗಾಪುರ, ಕುವೈತ್ ಹಾಗೂ ಕೊಲಂಬೋದಿಂದ ಬಂದಂತ ಪ್ರಯಾಣಿಕರನ್ನು ಅನುಮಾನಗೊಂಡಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದು ಪತ್ತೆಯಾಗಿದೆ.

ಸಿಂಗಾಪುರದಿಂದ ಬಂದಂತ ಪ್ರಯಾಣಿಕ ಶೂ ಹಾಗೂ ಲ್ಯಾಪ್ಟಾಪ್ ಗಳಲ್ಲಿ 945 ಗ್ರಾಂ ಚಿನ್ನವನ್ನು ಮರೆಮಾಚಿ ಸಾಗಾಟ ಮಾಡುತ್ತಿದ್ದಾಗ ಪತ್ತೆಯಾಗಿದೆ. ಕುವೈತ್ನಿಂದ ಆಗಮಿಸಿದ್ದ ಪ್ರಯಾಣಿಕ 689.65 ಗ್ರಾಂ ಚಿನ್ನವನ್ನು ಗುದದ್ವಾರದಲ್ಲಿ ಸಾಗಿಸುತ್ತಿದ್ದ. ಶ್ರೀಲಂಕಾದ ಕಲಂಬದಿಂದ ಬಂದ ಮತ್ತೊಬ್ಬ ಪ್ರಯಾಣಿಕ 13 ಪಾಯಿಂಟ್ ಮೂರು ಮೂರು ಗ್ರಾಂ ಚಿನ್ನವನ್ನು ಒಳಉಡುಪಿನಲ್ಲಿ ಇಟ್ಟುಕೊಂಡು ಬರುತ್ತಿದ್ದಾಗ ಪತ್ತೆಯಾಗಿದೆ. ಒಟ್ಟಾರೆ ಮೂವರಿಂದಲೂ ಕೂಡ 1.7 ಕೆಜಿ ಚಿನ್ನವನ್ನು ಕೆಂಪೇಗೌಡ ಏರ್ಪೋರ್ಟ್ ನ ಏರ್ ಕಸ್ಟಮ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ದುಬೈ ನಿಂದ ಬೆಂಗಳೂರಿಗೆ ಏರ್ಪೋರ್ಟ್‌ಗೆ ಇಂಡಿಗೋ ವಿಮಾನದಲ್ಲಿ ಆಗಮಿಸಿದ್ದ ಪ್ರಯಾಣಿಕ ಪಾಸ್ತಾ ಮೇಕರ್ ಮಷೀನ್ ನಲ್ಲಿ ಅಕ್ರಮವಾಗಿ 598 ಗ್ರಾಂ ಚಿನ್ನವನ್ನು ಸಾಗಟ ಮಾಡುತ್ತಿದ್ದಾಗ ಬಲೆಗೆ ಬಿದ್ದಿದ್ದಾನೆ. ಬ್ಯಾಗ್‌ನಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಾಟ ಮಾಡುತ್ತಿದ್ದಾಗ ಪರಿಶೀಲನೆ ವೇಳೆ ಅಕ್ರಮವಾಗಿ ಚಿನ್ನ ಸಾಗಾಟ ಪತ್ತೆಯಾಗಿದೆ. 35 ಲಕ್ಷ ಮೌಲ್ಯದ 598 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!