ಅರಿವನ್ನು ಜಾಗೃತಗೊಳಿಸಿಕೊಂಡಾಗ ಬದುಕು ಹಸನ: ರಂಭಾಪುರಿ ಶ್ರೀ

ಹೊಸದಿಗಂತ ವರದಿ, ರಾಯಚೂರು :

ಮನುಷ್ಯನಲ್ಲಿ ಅರಿವು ಮತ್ತು ಮರೆವು ಎನ್ನುವ ಎರಡು ಗುಣಗಳು ಸಹಜವಾಗಿರುತ್ತವೆ. ಇದರಲ್ಲಿ ಅರಿವನ್ನು ಜಾಗೃತಗೊಳಿಸಿಕೊಂಡಾಗ ಬದುಕು ಹಸನಾಗುತ್ತದೆ. ಜಿಡ್ಡುಗಟ್ಟಿದ ಭಾವನೆಗಳನ್ನು ಕಳೆದು ಸಾತ್ವಿಕ ನೆಲೆಗಟ್ಟಿನ ಮೇಲೆ ಸದ್ಭಾವನೆಗಳನ್ನು ಬೆಳೆಸುವುದೇ ಧರ್ಮದ ಗುರಿ. ಆದ್ದರಿಂದ ಅರಿವು ಆಚರಣೆ ಜೀವನ ಶ್ರೇಯಸ್ಸಿಗೆ ಕಾರಣ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಜಿಲ್ಲೆಯ ಲಿಂಗಸುಗೂರು ಪಟ್ಟಣದ ಜ್ಯೂನಿಯರ್ ಕಾಲೇಜ ಆವರಣದಲ್ಲಿ ಆರಂಭಗೊoಡ ೩೨ನೇ ವರ್ಷದ ದಸರಾ ಧರ್ಮ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಶಿವನನ್ನು ಬಿಟ್ಟು ಶಕ್ತಿ ಶಕ್ತಿಯನ್ನು ಬಿಟ್ಟು ಶಿವನಿಲ್ಲ. ಶಕ್ತಿ ವಿಶಿಷ್ಠನಾದ ಪರಮಾತ್ಮನ ಪೂಜೆ ಆರಾಧನೆ ನಡೆಯುತ್ತಾ ಬಂದಿದೆ. ಶಿವನ ಪೂಜಾರಾಧನೆ ಎಷ್ಟು ಪ್ರಾಚೀನವೋ ಶಕ್ತಿಯ ಪೂಜಾರಾಧನೆ ಅಷ್ಟೆ ಪ್ರಾಚೀನವಾಗಿದೆ ಎಂದರು.
ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿ, ಮಾನವೀಯ ಸಂಬAಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಇಂಥ ಸಮಾರಂಭಗಳು ನಮಗೆ ಅರಿವನ್ನು ಉಂಟು ಮಾಡಲಿಕ್ಕೆ ಸಾಧ್ಯವಿದೆ. ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊAಡು ನಡೆಯುವುದೇ ನಿಜವಾದ ಧರ್ಮ ಎಂದರು.
ಲಕ್ಷೆö್ಮÃಶ್ವರದ ಡಾ. ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ನವರಾತ್ರಿ ಸಂದರ್ಭದಲ್ಲಿ ಶಕ್ತಿ ಆರಾಧನೆಯ ಪ್ರಾಮುಖ್ಯತೆ ಕುರಿತು ಸುದೀರ್ಘವಾಗಿ ಮಾತನಾಡಿ, ಶಿವಶಕ್ತಿಯ ಅವಿನಾಭಾವ ಸಂಬAಧ ನವಶಕ್ತಿಯರ ಆರಾಧನೆಯ ಸ್ವರೂಪ ಜ್ಞಾನದ ಅವಶ್ಯಕತೆಯ ಬಗೆಗೆ ದೃಷ್ಟಾಂತಗಳ ಮೂಲಕ ವಿವರಿಸಿದರು.
ದಸರಾ ಸಮ್ಮೇಳನ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಚುನಾವಣಾ ಸಂಸದೀಯ ಮಂಡಳಿ ಸದಸ್ಯ ಡಾ. ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.
ವೇದಿಕೆಯಲ್ಲಿ ಶಾಸಕ ಮಾನಪ್ಪ ವಜ್ಜಲ, ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಗಣ್ಣ ಕರಡಿ, ಸಮ್ಮುಖ ವಹಿಸಿದ ದೇವರಭೂಪುರ ಅಭಿನವ ಗಜದಂಡ ಶಿವಾಚಾರ್ಯ ಸ್ವಾಮೀಜಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!