ದಿನಭವಿಷ್ಯ: ನಿಮಗೆ ಸರಿ ಅನಿಸದ್ದನ್ನು ಮಾಡಬೇಡಿ, ಇತರರ ಒತ್ತಡಕ್ಕೆ ಬಗ್ಗಬೇಡಿ!

ಮೇಷ
ಬಹಳ ಸಮಯದ ಬಳಿಕ ಇಂದು ಕೆಲಸದ ಒತ್ತಡದಿಂದ ವಿರಾಮ. ಇತರ ವಿಷಯಗಳತ್ತ ಗಮನ ಹರಿಸಲು ಅವಕಾಶ.ಬಂಧುಗಳ ಜತೆ ಕಾಲಕ್ಷೇಪ.

ವೃಷಭ
ವ್ಯಕ್ತಿಗತ ಸಮಸ್ಯೆ ಮನಶ್ಯಾಂತಿ ಕದಡುವುದು.  ಇತರರ ಜತೆಗೆ ಸಮಾಧಾನದಿಂದ ವರ್ತಿಸಿರಿ. ಸಮಸ್ಯೆಗೆ ಪರಿಹಾರದ ದಾರಿ ತೋರುವುದು.

ಮಿಥುನ
ಯಾವುದೇ ವಿಷಯದಲ್ಲಿ ಆತುರದ ತೀರ್ಮಾನಕ್ಕೆ  ಬರಬೇಡಿ. ಯೋಚಿಸಿ ನಿರ್ಧಾರ ತಾಳಿರಿ. ಆರೋಗ್ಯಕ್ಕೆ ಆದ್ಯ ಗಮನವಿರಲಿ. ಜಂಕ್‌ಫುಡ್ ತ್ಯಜಿಸಿರಿ.

ಕಟಕ
ನಿಮಗೆ ಸರಿಕಾಣದ ಕಾರ್ಯ ಮಾಡಲು ಹೋಗಬೇಡಿ. ಇತರರ ಒತ್ತಡಕ್ಕೆ ಬಗ್ಗಬೇಡಿ. ಸ್ವಂತ ಅಭಿಪ್ರಾಯವನ್ನಷ್ಟೆ ನೆಚ್ಚಿಕೊಳ್ಳಿ.

ಸಿಂಹ
ಗುರಿಯನ್ನು ಸಾಧಿಸಬೇಕಾದರೆ ಕೆಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕು. ಕೌಟುಂಬಿಕ ಒತ್ತಡ ಕಡಿಮೆಯಾಗಲಿದೆ. ವೃತ್ತಿಯಲ್ಲಿ ಉನ್ನತಿ.

ಕನ್ಯಾ
ಪ್ರಮುಖವಲ್ಲದ ವಿಷಯವನ್ನು ದೊಡ್ಡದು ಮಾಡಬೇಡಿ. ಅದರಿಂದ ನೀವಾಗಿ ಸಮಸ್ಯೆ ಸೃಷ್ಟಿಸಿಕೊಳ್ಳುವಿರಿ. ಇತರರ ಮನಸನ್ನು ಅರ್ಥ ಮಾಡಿಕೊಳ್ಳಿರಿ.

ತುಲಾ
ಆಸ್ತಿ ಅಥವಾ ಇನ್ನಿತರ ವ್ಯವಹಾರದಲ್ಲಿ ಹಣ ಹೂಡಲು ಕಾಲ ಪ್ರಶಸ್ತವಾಗಿದೆ. ದಂಪತಿ ನಡುವಿನ ಭಿನ್ನಮತ ಪರಿಹಾರ. ಚರ್ಮದ ಅಲರ್ಜಿ ಸಂಭವ.

ವೃಶ್ಚಿಕ
ನಿಮ್ಮ ನಾಯಕತ್ವ ಗುಣ ನಿಮ್ಮನ್ನು ಉನ್ನತಿಗೆ ಕೊಂಡೊಯ್ಯುವುದು. ಸಮಸ್ಯೆಗಳನ್ನು ತಾರ್ಕಿಕವಾಗಿ ಬಗೆಹರಿಸಿ. ಭಾವುಕತೆಯಿಂದ ಪ್ರತಿಕ್ರಿಯಿಸಬೇಡಿ.

ಧನು
ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಗಮನ ಕೊಡಿ. ಪ್ರೀತಿಪಾತ್ರರ ಜತೆ ವಾಗ್ವಾದಕ್ಕೆ ಇಳಿಯದಿರಿ. ಇತರರ ಮಾತು ಕೇಳಿರಿ.

ಮಕರ
ಕೆಲವು ಚಿಂತೆ ನಿಮ್ಮನ್ನು ಕಾಡುತ್ತಿದೆ. ಅದಕ್ಕೆ ಪರಿಹಾರವೂ ನಿಮ್ಮಲ್ಲೇ ಇದೆ. ಇಂದು ನಿಮಗೆ ಈ ಪರಿಹಾರದ ದಾರಿ ತೋರಬಹುದು. ಅವಕಾಶ ಬಳಸಿಕೊಳ್ಳಿ.

ಕುಂಭ
ವೃತ್ತಿಯಲ್ಲಿನ ಒತ್ತಡ ನಿವಾರಣೆ. ಹಾಗಾಗಿ ಮಾನಸಿಕ ನಿರಾಳತೆ. ಆರೋಗ್ಯ ಕಾಪಾಡಲು ದೇಹಾಭ್ಯಾಸ ಮುಖ್ಯ, ಆಲಸ್ಯ ಸಲ್ಲದು. ಇದು ನಿಮಗೆ ತಿಳಿದಿರಲಿ.

ಮೀನ
ನಿಮ್ಮ ನಿರ್ಧಾರಕ್ಕೆ ಹಿರಿಯರ ಸಮ್ಮತಿ. ಇತರರನ್ನು ಮೆಚ್ಚಿಸಲು ಯತ್ನಿಸುವುದಕ್ಕಿಂತ ನಿಮಗೆ ಸಂತೋಷ ತರುವ ಕಾರ್ಯಕ್ಕೆ ಮುಂದಾಗಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!