ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯ ಆಟ ಈಗಷ್ಟೇ ಶುರುವಾಗಿದ್ದು, ಮೊದಲನೇ ವಾರದಲ್ಲೇ ಸ್ನೇಕ್ ಶ್ಯಾಮ್ ಎಲಿಮಿನೇಟ್ ಆಗಿದ್ದಾರೆ.
ಗೆಲ್ಲುವ ಕನಸು ಹೊತ್ತು ಬಿಗ್‌ಬಾಸ್‌ಗೆ ಬಂದಿದ್ದ ಸ್ನೇಕ್ ಶ್ಯಾಮ್ ಮೊದಲನೇ ವಾರದಲ್ಲಿ ಹೊರಬಂದಿದ್ದು, ಅಭಿಮಾನಿಗಳಿಗೆ ಬೇಸರವಾಗಿದೆ.
ಮನೆಗೆ ಬಂದ ನಂತರ ಮನೆಯ ವಾತಾವರಣಕ್ಕೆ ಅಡ್ಜಸ್ಟ್ ಆಗೋದಕ್ಕೆ ಶ್ಯಾಮ್ ಕಷ್ಟಪಟ್ಟಿದ್ದು, ಮನೆಯವರೆಲ್ಲ ಅವರ ಆರೋಗ್ಯ ಕಾರಣ ಮಾಡಿ ಅಸಮರ್ಥ ಆಗುವಂತೆ ಮಾಡಿದ್ದರು.
ಇದಾದ ನಂತರ ಸ್ನೇಕ್ ಶ್ಯಾಮ್ ಹೆಚ್ಚು ಕಾಣಿಸಿಕೊಂಡೇ ಇಲ್ಲ. ಈ ಎಲ್ಲ ಕಾರಣಗಳಿಂದ ಶ್ಯಾಮ್ ಔಟ್ ಆಗಿದ್ದಾರೆ.