CINE| ʻನನ್ನ ಪತ್ನಿ ಜೊತೆ ಇಂತಹ ಕಾರ್ಯಕ್ರಮಕ್ಕೆ ಬರುತ್ತಿರುವುದು ಇದೇ ಮೊದಲುʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಸೂಪರ್ ಜೋಡಿ ಮಹೇಶ್ ಬಾಬು ಮತ್ತು ನಮ್ರತಾ ಸಖತ್‌ ಸುದ್ದಿಯಲ್ಲಿರುವ ದಂಪತಿ. ಸದಾ ಸಾಮಾಜಿಕ ಕಾರ್ಯಗಳೊಂದಿಗೆ ಜನರೊಂದಿಗೆ ಬೆರೆಯುವ ಈ ದಂಪತಿ ಬ್ರ್ಯಾಂಡ್ ಪ್ರಚಾರಗಳೊಂದಿಗೆ ಉದ್ಯಮದಲ್ಲಿ ಭಾರೀ ಹೆಸರು ಮಾಡಿದ್ದಾರೆ.  ಇತ್ತೀಚೆಗೆ ಈ ಜೋಡಿ ‘ಗೌರಿ ಸಿಗ್ನೇಚರ್ಸ್’ ಎಂಬ ಕಂಪನಿಗೆ ಸಹಿ ಹಾಕಿದ್ದು, ಈ ಬ್ರಾಂಡ್‌ಗೆ ಸಂಬಂಧಿಸಿದ ಶಾಖೆಯನ್ನು ಹೈದರಾಬಾದ್‌ನಲ್ಲಿ ತೆರೆಯಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಮತ್ತು ನಮ್ರತಾ ಭಾಗವಹಿಸಿ, ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ಮಹೇಶ್ ಹೇಳಿದ ಕೆಲವು ಕಾಮೆಂಟ್‌ಗಳು ನೆಟ್‌ನಲ್ಲಿ ವೈರಲ್ ಆಗಿವೆ.

ʻನನ್ನ ಪತ್ನಿಯೊಂದಿಗೆ  ಇಂತಹ ಕಾರ್ಯಕ್ರಮಕ್ಕೆ ಬರುತ್ತಿರುವುದು ಇದೇ ಮೊದಲು ತುಂಬಾ ಖುಷಿಯಾಗಿದೆʼ ಎಂದರು. ಅಲ್ಲದೇ ನಮ್ರತಾ ಅವರಿಗೆ ಏನು ಗಿಫ್ಟ್ ಕೊಡುತ್ತೀರಿ ಎಂಬ ಪ್ರಶ್ನೆಗೆ ಮಹೇಶ್ ಬಾಬು ಅವರು ಇಡೀ ಅಂಗಡಿಯೇ ಬೇಕು ಎಂದು ಉತ್ತರಿಸಿದ್ದಕ್ಕೆ ಎಲ್ಲರೂ ನಕ್ಕರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದೀಗ ವೈರಲ್ ಆಗಿವೆ.

ಇತ್ತೀಚೆಗೆ ಮ್ಯಾಗಜಿನ್‌ಗಾಗಿ ಮಹೇಶ್ ಸ್ಟೈಲಿಶ್ ಫೋಟೋಶೂಟ್ ಮಾಡಿದ್ದಾರೆ. ಆ ಚಿತ್ರಗಳಲ್ಲಿ ಮಹೇಶ್ ಬಾಬು ಅವರ ಲುಕ್ ನೋಡಿ ಎಲ್ಲರೂ ಉತ್ಸುಕರಾಗುತ್ತಿದ್ದಾರೆ. ವಯಸ್ಸಾದಂತೆ ಮಹೇಶ್ ಬಾಬು ಸೌಂದರ್ಯ ಹೆಚ್ಚುತ್ತಲೇ ಇದೆ ಎಂಬ ಕಾಮೆಂಟ್ ಗಳು ಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!