ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿದ್ದು, ದಸರಾ ಮಹೋತ್ಸವ ವೀಕ್ಷಿಸಲು ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಪ್ರವಾಸಿಗರಿಗೆ ಅನುಕೂಲವಾಗಲೆಂದು ಜಿಲ್ಲಾಡಳಿತ ಗೋಲ್ಡ್ ಕಾರ್ಡ್ ಸೌಲಭ್ಯವನ್ನು ಬಿಡುಗಡೆ ಮಾಡಲಿದೆ. ಗೋಲ್ಡ್ ಕಾರ್ಡ್‌ನ್ನು ಆನ್‌ಲೈನ್‌ನಲ್ಲಿ ಮಾತ್ರ ಪಡೆಯಬಹುದಾಗಿದೆ.
ಗೋಲ್ಡ್ ಕಾರ್ಡ್ ಖರೀದಿಗೆ ಆರು ಸಾವಿರ ರೂಪಾಯಿ ನೀಡಬೇಕಿದೆ, ಒಬ್ಬರಿಗೆ ಎರಡು ಗೋಲ್ಡ್ ಕಾರ್ಡ್ ಪಡೆಯಲು ಮಾತ್ರ ಅವಕಾಶ ನೀಡಲಾಗದೆ.
ಆನ್‌ಲೈನ್‌ನಲ್ಲಿ ಗೋಲ್ಡ್ ಕಾರ್ಡ್ ಖರೀದಿ ಮಾಡಿದ ನಂತರ ಕಾರ್ಡ್‌ನ್ನು ಯಾವಾಗ ಪಡೆಯಬಹುದು ಎನ್ನುವ ಎಸ್‌ಎಂಎಸ್ ಬರುತ್ತದೆ. ಐಡಿ ನೀಡಿ ಗೋಲ್ಡ್ ಕಾರ್ಡ್ ಪಡೆಯಬಹುದಾಗಿದೆ. ಗೋಲ್ಡ್ ಕಾರ್ಡ್ ಪಡೆದವರು ಯಾವುದೇ ಕಾರ್ಯಕ್ರಮವನ್ನು ವೀಕ್ಷಣೆ ಮಾಡಬಹುದಾಗಿದೆ. ಜಂಬೂ ಸವಾರಿ ಮೆರವಣಿಗೆಯನ್ನು ನೋಡಲು ಅವಕಾಶ ಸಿಗುತ್ತದೆ. ಅರಮನೆ ಮುಂದೆ ವಿಐಪಿ ಲಾಂಜ್‌ನಲ್ಲಿ ಕೂರಲು ಅವಕಾಶ ನೀಡಲಾಗುತ್ತದೆ.