ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾನ್ ಇಂಡಿಯಾ ಸ್ಟಾರ್ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್, ಎಷ್ಟೇ ಬ್ಯುಸಿಯಾಗಿದ್ದರು ಅಭಿಮಾನಿಗಳ ಜೊತೆ ಆಗಾಗ ಮಾತನಾಡೋದನ್ನು ರಶ್ಮಿಕಾ ಮರೆಯೋದಿಲ್ಲ.
ಹಾಗೇ ರಶ್ಮಿಕಾ ಪೋಸ್ಟ್ ಮಾಡುವ ಫೋಟೊಗಳಿಗೂ ಲಕ್ಷಾಂತರ ಲೈಕ್ಸ್ ಬರುತ್ತವೆ. ಇದೀಗ ರಶ್ಮಿಕಾ ಹೊಸ ಫೋಟೊ ಒಂದನ್ನು ಅಪ್‌ಲೋಡ್ ಮಾಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.
ರಶ್ಮಿಕಾ ಟೀಂ ಈ ಫೋಟೊ ಪೋಸ್ಟ್ ಮಾಡಿದ್ದು, ಈ ಫೋಟೊ ಕ್ಲಿಕ್ ಮಾಡಿ ಒಂದು ವರ್ಷವೇ ಆಗಿದೆ, ರಶ್ಮಿಕಾಗೆ ನಾವು ಈ ಫೋಟೊ ಹಾಕ್ತಿರೋ ವಿಷಯ ಗೊತ್ತಿಲ್ಲ, ಎಲ್ಲ ನಿಮಗೋಸ್ಕರ ಅನ್ನೋ ಕ್ಯಾಪ್ಷನ್ ನೀಡಿದ್ದಾರೆ.
ಫೋಟೊ ಎಲ್ಲೆಡೆ ವೈರಲ್ ಆಗಿದ್ದು, ರಶ್ಮಿಕಾ ಸಖತ್ ಬೋಲ್ಡ್ ಆಗಿ ಕಾಣ್ತಿದ್ದಾರೆ ಎಂದು ಹೇಳಿದ್ದಾರೆ.