ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತ್ನಿಯ ಅಡುಗೆ ರುಚಿ ಹಿಡಿಸುತ್ತಿಲ್ಲ, ಆಕೆ ಕೆಟ್ಟದಾಗಿ ಅಡುಗೆ ಮಾಡುತ್ತಾಳೆ ಎಂದು ವ್ಯಕ್ತಿಯೋರ್ವ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು, ಕೇರಳ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ.
ಹೆಂಡತಿಗೆ ಅಡುಗೆ ಮಾಡೋದಕ್ಕೆ ಬರುವುದಿಲ್ಲ ಅಥವಾ ಕೆಟ್ಟದಾಗಿ ಅಡುಗೆ ಮಾಡುತ್ತಾಳೆ ಎಂದರೆ ಅದು ಕ್ರೌರ್ಯವಲ್ಲ, ಈ ಕಾರಣವನ್ನು ಪರಿಗಣಿಸಲು ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪತ್ನಿಗೆ ಅಡುಗೆ ಕೌಶಲ್ಯ ಇಲ್ಲ ಇದರಿಂದ ನಮ್ಮ ಸಂಸಾರದಲ್ಲಿ ಸಾಕಷ್ಟು ತೊಂದರೆ ಆಗುತ್ತಿದೆ, ಆಕೆ ನನ್ನನ್ನು ಅನುಮಾನಿಸುತ್ತಾಳೆ, ನನ್ನ ಮೇಲೆ ಉಗುಳುತ್ತಾಳೆ, ಕೆಲಸ ಮಾಡುವ ಕಂಪನಿಯಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾಳೆ ಎಂದು ಪತಿ ದೂರಿದ್ದಾರೆ.
ಇನ್ನು ಪತ್ನಿ ಮದುವೆ ಉಳಿಸಿಕೊಳ್ಳಲು ಬಯಸಿದ್ದು, ಕಂಪನಿಗೆ ಇಮೇಲ್ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ವಿಚ್ಛೇದನವನ್ನು ಸಮರ್ಥಿಸುವಷ್ಟು ಆಧಾರಗಳಿಲ್ಲ ಎಂದು ಕೋರ್ಟ್ ಹೇಳಿದೆ.