ಹೊಸದಿಗಂತ ವರದಿ ವಿಜಯಪುರ:
ಮಹಿಳೆಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನಾಗಠಾಣ ಗ್ರಾಮದಲ್ಲಿ ನಡೆದಿದೆ.
ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಮೃತಪಟ್ಟ ಮಹಿಳೆಯು ರೇಖಾ ನಾಗಪ್ಪ ಕೊಣ್ಣೂರ (28) ಎಂದು ಗುರುತಿಸಲಾಗಿದೆ.
ರೇಖಾ ಕೊಣ್ಣೂರ ತನ್ನ ಗಂಡನ ಮನೆಯರ ಕಿರುಕುಳಕ್ಕೆ ಬೇಸತ್ತು ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಸಾವಿಗೆ ಅವಳ ಗಂಡ ನಾಗಪ್ಪ ಶಂಕರೆಪ್ಪ ಕೊಣ್ಣೂರ ಮತ್ತು ಅವರ ಕುಟುಂದವರಾದ ಶಂಕರೆಪ್ಪ ಕೊಣ್ಣೂರ ಹಾಗೂ ಸುಸಲವ್ವ ಕೊಣ್ಣೂರ ಎಂಬುವರೇ ಕಾರಣ ಎಂದು ರೇಖಾ ಅವರ ಪೋಷಕರು ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ರೇಖಾ ಅವರ ಪೋಷಕರು ದೂರು ದಾಖಲಿಸಿದ್ದು,
ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.