ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ದಸರಾ ಜಂಬೂ ಸವಾರಿ ದಿನ ನಾಡದೊರೆ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಕೊಡಲು ವಿಸೇಷ ಉಡುಗೊರೆ ಸಿದ್ಧವಾಗಿದೆ.
ಕಲಾವಿದ ರಾಜೇಶ್ ಈ ಉಡಗೊರೆಗಳನ್ನು ಸಿದ್ದಪಡಿಸಿದ್ದು, ಜಂಬೂಸವಾರಿ ದಿನ ಸಿಎಂ, ಡಿಸಿಎಂಗೆ ನೀಡಲಿದ್ದಾರೆ.ಸಿದ್ಧರಾಮಯ್ಯರಿಗೆ ಪಂಚಲೋಹದಿಂದ ತಯಾರಿಸಲಾದ ನ್ಯಾಯದೇವತೆಯ ವಿಗ್ರಹ ಹಾಗೂ ಪುತ್ರ ರಾಕೇಶ್ 3D ಭಾವಚಿತ್ರ ತಯಾರಾಗಿದೆ.
ಹಾಗೆಯೇ ಡಿಕೆಶಿಗೂ ಕೂಡ ಅವರ ತಂದೆ ಕೆಂಪೇಗೌಡರ 3D ಭಾವಚಿತ್ರ ಉಡುಗೊರೆಯಾಗಿ ಸಿಗಲಿದೆ. ಕಲಾವಿದ ರಾಜೇಶ್ ಜಂಬೂಸವಾರಿಯಂದು ಗಿಫ್ಟ್ ನೀಡಲಿದ್ದಾರೆ.