RECIPE| ಹಬ್ಬದ ವಿಶೇಷ ಖರ್ಜೂರ ಹಲ್ವಾ ಸವಿದು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಗ್ರಿಗಳು:

ಖರ್ಜೂರ
ಬಿಸಿ ಹಾಲು
ಸಕ್ಕರೆ
ತುಪ್ಪ
ಏಲಕ್ಕಿ ಪುಡಿ
ಬಾದಾಮಿ

ಮಾಡುವ ವಿಧಾನ:

* ಬಿಸಿ ಹಾಲಿನಲ್ಲಿ ಖರ್ಜೂರವನ್ನು ನೆನೆ ಹಾಕಬೇಕು. ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ.
* ಈಗ ತಟ್ಟೆಯೊಂದಕ್ಕೆ ತುಪ್ಪ ಸವರಿಟ್ಟುಕೊಳ್ಳಬೇಕು.
* ಒಲೆಯ ಮೇಲೆ ಬಾಣಲೆಯೊಂದಕ್ಕ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ರುಬ್ಬಿಕೊಂಡ ಖರ್ಜೂರದ ಪೇಸ್ಟ್ ಹಾಗೂ ಸಕ್ಕರೆ ಹಾಕಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಸೌಟ್ ನಿಂದ ತಿರುಗಿಸುತ್ತಿರಿ.
* ಈಗ ಅದಕ್ಕೆ ಏಲಕ್ಕಿ ಹಾಕಿ. ಈ ಮಿಶ್ರಣವನ್ನು ತುಪ್ಪಸವರಿದ ತಟ್ಟೆಗೆ ಹಾಕಿ ಅದರ ಮೇಲೆ ಬಾದಾಮಿಯನ್ನು ಉದುರಿಸಿ ತಣ್ಣಾಗಾಗಲು ಬಿಡಿ.

ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡರೆ ಖರ್ಜೂರದ ಹಲ್ವಾ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!