ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ದಪ್ಪ ಅವಲಕ್ಕಿ ಕಾಲು ಕೆಜಿ, ಖೋವ ನೂರು ಗ್ರಾಂ, ಗೋಡಂಬಿ ಕಾಲು ಕೆಜಿ, ದ್ರಾಕ್ಷಿ ನೂರ ಗ್ರಾಂ, ಬಾದಾಮಿ ನೂರು ಗ್ರಾಂ, ಒಂದೂವರೆ ಕಪ್ ತೆಂಗಿನ ತುರಿ, ಅರ್ಧ ಚಮಚ ಅರಶಿನ ಪುಡಿ, ಏಲಕ್ಕಿ ಪುಡಿ ಸ್ವಲ್ಪ, ರುಚಿಗೆ ಬೇಕಾದಷ್ಟು ಉಪ್ಪು, ಮೆಣಸಿನ ಪುಡಿ ಸ್ವಲ್ಪ, ಗರಂ ಮಸಾಲ ಸ್ವಲ್ಪ, ಕೊತ್ತಂಬರಿ ಪುಡಿ ಸ್ವಲ್ಪ, ಹಸುವಿನ ತುಪ್ಪ ಒಂದು ಕಪ್, ತೆಂಗಿನೆಣ್ಣೆ, ಕಡಲೆ ಹಿಟ್ಟು ಒಂದೂವರೆ ಕಪ್, ಇಂಗು, ಜೀರಿಗೆ ಸ್ವಲ್ಪ
ಮಾಡುವ ವಿಧಾನ:
ದಪ್ಪ ಅವಲಕ್ಕಿಯನ್ನು ಒಂದು ಪಾತ್ರೆಯಲ್ಲಿ ಸಾಕಷ್ಟು ನೀರು ಹಾಕಿ ನೆನೆಯಲು ಬಿಡಿ. ಸರಿಯಾಗಿ ನೆನೆದ ಬಳಿಕ ನೀರು ಸೋಸಿ ಮಿಕ್ಸಿಯಲ್ಲಿ ತಿರುಗಿಸಿ. ಬಾಣಲೆಯನ್ನು ಬಿಸಿಗಿಟ್ಟು ತುಪ್ಪದಲ್ಲಿ ಗೋಡಂಬಿ ಫ್ರೈ ಮಾಡಿ. ದ್ರಾಕ್ಷಿ, ತೆಂಗಿನ ತುರಿ, ಗೋಡಂಬಿ ಸೇರಿಸಿ ಮಿಕ್ಸಿಯಲ್ಲಿದ್ದ ಅವಲಕ್ಕಿ ಹಿಟ್ಟಿಗೆ ಸೇರಿಸಿಕೊಳ್ಳಿ. ಸರಿಯಾಗಿ ಕಲೆಸಿ ಗಟ್ಟಿ ಮಿಶ್ರಣವಾದಂತೆ ಉಂಡೆ ಕಟ್ಟಿ.
ಪ್ರತ್ಯೇಕ ಪಾತ್ರೆಯಲ್ಲಿ ಕಡಲೆ ಹಿಟ್ಟು ತೆಗೆದುಕೊಳ್ಳಿ, ಸ್ವಲ್ಪ ನೀರು ಹಾಕಿ, ಹಿಂಗು, ಉಪ್ಪು, ಮೆಣಸಿನ ಹುಡಿ, ಅರಶಿನ ಹುಡಿ, ಕೊತ್ತಂಬರಿ ಪುಡಿ, ಗರಂ ಮಸಲಾ ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಹಿಟ್ಟು ತಯಾರು ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿಗಿಟ್ಟು, ಸರಿಯಾಗಿ ಕಾದ ನಂತರ ಉಂಡೆಯನ್ನು ಈ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ.
ಉಳಿದ ಕಾಯಿ ತುರಿಗೆ ಏಲಕ್ಕಿ ಪುಡಿ ಸೇರಿಸಿ ನಯವಾಗಿ ಹಿಟ್ಟು ತಯಾರಿಸಿ. ಬಾಣಲೆಯಲ್ಲಿ ತುಪ್ಪದಲ್ಲಿ ಜೀರಿಗೆ ಫ್ರೈಮಾಡಿ ನಯವಾದ ಹಿಟ್ಟನ್ನು ಸೇರಿಸಿ, ಖೋವಾ, ಉಪ್ಪು, ಮೆಣಸಿನ ಹುಡಿ, ಸ್ವಲ್ಪ ನೀರು ಸೇರಿಸಿ ಸರಿಯಾಗಿ ಕೈಯಾಡಿಸಿ. ರಸ ಸರಿಯಾಗಿ ಕುದಿದ ಮೇಲೆ ಕರಿದಿಟ್ಟ ಕೋಫ್ತವನ್ನು ಸೇರಿಸಿಕೊಳ್ಳಿ. ಬಿಸಿ ಬಿಸಿಯಾದ ಕೋಫ್ತ ರುಚಿಯಾಗಿರುತ್ತದೆ.