ರಷ್ಯಾದ ಅಧ್ಯಕ್ಷ ಪುಟಿನ್ ಗೆ ಹೃದಯ ಸ್ತಂಭನ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ ಎಂದು ರಷ್ಯಾದ ಕ್ರೆಮ್ಲಿನ್‌ನ ಟೆಲಿಗ್ರಾಮ್‌ ಚಾನೆಲ್‌ ಮಾಹಿತಿ ನೀಡಿದೆ.

ರಷ್ಯಾ ಅಧ್ಯಕ್ಷ ಪುಟಿನ್‌ “ನೆಲದ ಮೇಲೆ ಬಿದ್ದಿದ್ದರು ಮತ್ತು ಅವರ ಕಣ್ಣುಗಳನ್ನು ಹೊರಳಿಸುತ್ತಿದ್ದರು’’ ಎಂದು ಕ್ರೆಮ್ಲಿನ್‌ನ ಟೆಲಿಗ್ರಾಮ್ ಚಾನೆಲ್‌ ವರದಿ ಮಾಡಿದೆ. ಹಿಂದೆ, ಅದೇ ಚಾನಲ್ ರಷ್ಯಾದ ನಾಯಕನ ಆರೋಗ್ಯದ ಬಗ್ಗೆ ಇದೇ ರೀತಿ ಅಪ್ಡೇಟ್ಸ್‌ ಅನ್ನು ನೀಡಿತ್ತು. ಅಕ್ಟೋಬರ್ 22 ರಂದು ವ್ಲಾಡಿಮಿರ್‌ ಪುಟಿನ್‌ಗೆ ಹೃದಯ ಸ್ತಂಭನ ಉಂಟಾಗಿತ್ತು ಎಂದು ತಿಳಿದುಬಂದಿದೆ.

ವೈದ್ಯರನ್ನು ತಕ್ಷಣವೇ ಕರೆಯಲಾಯಿತು ಹಾಗೂ 71 ವರ್ಷದ ಅಧ್ಯಕ್ಷರನ್ನುಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಿಸಲಾದ ವಿಶೇಷ ವೈದ್ಯಕೀಯ ಸೌಲಭ್ಯಕ್ಕೆ ರವಾನಿಸಲಾಯ್ತು. ಅಲ್ಲಿ ಅವರು ತೀವ್ರ ನಿಗಾ ಘಟಕಕ್ಕೆ ಒಳಗಾಗಿದ್ದರು ಎಂದೂ ಟೆಲಿಗ್ರಾಮ್‌ ಚಾನೆಲ್‌ ಹೇಳಿದೆ.

General SVR ಎಂಬ ಈ ಟೆಲಿಗ್ರಾಮ್‌ ಚಾನೆಲ್‌ ಈ ಕುರಿತು ಮಾಹಿತಿ ನೀಡಿದ್ದು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭದ್ರತಾ ಅಧಿಕಾರಿಗಳು ನಿವಾಸದಲ್ಲಿ ಕರ್ತವ್ಯದಲ್ಲಿದ್ದರು, ಅಧ್ಯಕ್ಷರ ಮಲಗುವ ಕೋಣೆಯಿಂದ ಬೀಳುವ ಶಬ್ದ ಮತ್ತು ಶಬ್ದಗಳನ್ನು ಕೇಳಿದರು ಎಂದೂ ಹೇಳಿಕೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!