ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಸ್ ಅಧಿಕಾರಿ ಡಿ. ರೂಪಾ (IPS Officer Roopa) ಖಡಕ್ ಪೊಲೀಸ್ ಅಧಿಕಾರಿ ಎಲ್ಲರು ನೋಡಿ ಇರುತಿರಾ . ಆದ್ರೆ ಇದೀಗ ಕೈಯಲ್ಲಿ ಖಡ್ಗ ಹಿಡಿದು ಬಂದಿದ್ದಾರೆ.
ಹೌದು. ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ.ಹಬ್ಬದ ಪ್ರಯುಕ್ತ ಕೆಲವರು ಫೋಟೋಶೂಟ್ (D Roopa Photoshoot) ಮಾಡಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಇಂದು ಖಡಕ್ ಅಧಿಕಾರಿ ಕೂಡ ಲಾಠಿ ಹಿಡಿಯುವ ಕೈಯಲ್ಲಿ ಖಡ್ಗ ಹಿಡಿದು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಪೊಲೀಸ್ ಯೂನಿಫಾರ್ಮ್ನಲ್ಲಿ ಇರುತ್ತಿದ್ದ ರೂಪಾ ಅವರು ಇದೀಗ ಕೈಯಲ್ಲಿ ಖಡ್ಗ ಹಿಡಿದು, ಕೆಂಪು ಸೀರೆ, ಹಸಿರು ಬಣ್ಣ ಬ್ಲೌಸ್, ಮೈತುಂಬಾ ಆಭರಣ ತೊಟ್ಟು ಸಿಂಹಾಸನದಲ್ಲಿ ಥೇಟ್ ರಾಣಿಯಂತೆ ಕಂಗೊಳಿಸುತ್ತಿದ್ದಾರೆ.
ರೂಪ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆಯೇ ಹಲವಾರು ಕಾಮೆಂಟ್ಗಳು ಬರತೊಡಗಿದವು. ಕೆಲವರು ಹ್ಯಾಟ್ಸಾಫ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ ಅಂದ್ರೆ ಇನ್ನೂ ಕೆಲವರು ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ಹಾಗೂ ಜೈ ದುರ್ಗಿ ಅಂತೆಲ್ಲ ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಕೇವಲ ಫ್ಯಾಷನ್ ಮಾತ್ರ ಅಲ್ಲ, ಬದಲಾಗಿ ಮಹಿಳಾ ಶಕ್ತಿ ಹಾಗೂ ಸಬಲೀಕರಣದ ಪ್ರತೀಕ ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ.