ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಸ್ಫೋಟ ಅನಿರೀಕ್ಷಿತ. ಸಿಲಿಂಡರಿನ ತಾಪಮಾನ ಹೆಚ್ಚಾಗಿ ಸ್ಫೋಟಗೊಂಡಿದೆ ಎಂದು ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ನಿನ್ನೆ ರಾತ್ರಿ ಸುಮಾರು 8.30ರ ಸುಮಾರಿಗೆ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಈಗಷ್ಟೇ ಮತ್ತೊಬ್ಬರು ಮೃತಪಟ್ಟ ಸುದ್ದಿ ತಿಳಿದುಬಂದಿದೆ. ಈ ಬಾರಿ ಬಲೂನ್ ಮಾರಾಟ ಮಾಡುತ್ತಿದ್ದರು. ಹೊರಗಡೆಯಿಂದ ಗ್ಯಾಸ್ ಸಿಲಿಂಡರ್ ತಂದು ಅವರು ಬಲೂನ್ ವ್ಯಾಪಾರ ಮಾಡುತ್ತಿದ್ದರು. ಆ ಸಿಲಿಂಡರ್ ತಾಪಮಾನ ಹೆಚ್ಚಾಗಿ ಸ್ಫೋಟಗೊಂಡಿದೆ ಎಂದು ತಿಳಿಸಿದರು.
ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸಲು ನಾವು ಅವಕಾಶ ಕೊಡುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಅವರೇ ಗ್ಯಾಸ್ ಸಿಲಿಂಡರ್ ತಂದಿದ್ದಾರೆ. ಪೌಡರ್ ಮಿಕ್ಸ್ ಮಾಡಿ ಅವರೇ ರಾಸಾಯನಿಕ ಮಾಡಿಕೊಳ್ಳುತ್ತಾರೆ. ಅನಿರೀಕ್ಷಿತವಾಗಿ ಸ್ಫೋಟ ನಡೆದಿದೆ. ಇದೊಂದು ಪಾಠ. ಗಾಯಾಳುಗಳ ಚಿಕಿತ್ಸಾ ವೆಚ್ಚಗಳನ್ನು ಸರ್ಕಾರವೇ ನಿರ್ವಹಿಸಲಿದೆ. ಮುಖ್ಯಮಂತ್ರಿಗಳು ಪರಿಹಾರ ಘೋಷಿಸುವ ಬಗ್ಗೆ ಮಾತನಾಡಿದ್ದಾರೆ. ಎನ್‌ಐಎ ಮಾಹಿತಿ ಕೇಳಿರುವುದು ರುಟೀನ್ ಅಷ್ಟೇ. ಅವರು ತನಿಖೆ ಮಾಡಬಹುದು ಎಂದರು.

