ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಲಿ ಉಗುರು ಪೆಂಡೆಂಟ್ ಹೊಂದಿರುವ ಆರೋಪದಡಿ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ತೂಗುದೀಪ, ಜಗ್ಗೇಶ್,ನಿಖಿಲ್ ಕುಮಾರಸ್ವಾಮಿ ಸೇರಿದಂತೆ ನಾಲ್ವರ ಮನೆಗಳ ಮೇಲೆ ಪರಿಶೀಲನೆ ನಡೆಸಿದ್ದಾರೆ.
ನಟರಾದ ಜಗ್ಗೇಶ್, ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ನಿವಾಸಗಳಲ್ಲಿ ಇಲಾಖೆಯ ನಾಲ್ಕು ತಂಡಗಳು ಪ್ರತ್ಯೇಕವಾಗಿ ತೆರಳಿದ್ದು, ನೊಟೀಸ್ ನೀಡಿ, ಮನೆಯ ಇಂಚಿಂಚೂ ಶೋಧಿಸಿವೆ.
ನಟ ಜಗ್ಗೇಶ್ ಮನೆಯಲ್ಲಿ ನಾವು ಯಾವುದೇ ತಪಾಸಣೆ ನಡೆಸಲಿಲ್ಲ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ‘ ನಟ ಜಗ್ಗೇಶ್ ಮನೆಯಲ್ಲಿ ನಾವು ಯಾವುದೇ ತಪಾಸಣೆ ನಡೆಸಲಿಲ್ಲ. ಪತ್ನಿ ಲಾಕೆಟ್ ಕೊಟ್ಟಿದ್ದಾರೆ . ಜಗ್ಗೇಶ್ ಹೋಗುವಾಗ ಕೊಟ್ಟು ಹೋಗಿದ್ದಾರೆ. ಇಂದು ಜಗ್ಗೇಶ್ ಮನೆಯಲ್ಲಿ ಇರಲಿಲ್ಲ, ತಾಯಿ ಕೊಟ್ಟಿದ್ದು ಪೂಜೆ ಮಾಡಿ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ ಎಂದರು.
ಜಗ್ಗೇಶ್ ಬಳಿ ಇರುವುದು 40 ವರ್ಷದ ಹಳೆಯದಾದ ಪೆಂಡೆಂಟ್. ಹೀಗಾಗಿ ಡಿಎನ್ಎ ನಡೆಸಲು ಡೆಹ್ರಾಡೂನ್ ಲ್ಯಾಬ್ಗೆ ಕಳುಹಿಸಲಾಗುತ್ತದೆ. ಹುಲಿಯ ಉಗುರಾಗಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಹೇಳಿದ್ದಾರೆ.