ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹುಲಿಯ ಉಗುರು ಸದ್ದು ಮಾಡುತ್ತಿದ್ದು , ನಟರಾದ ದರ್ಶನ್ , ಜಗ್ಗೇಶ್ ನಿಖಿಲ್ ಕುಮಾರಸ್ವಾಮಿ ಹಾಗೂ ರಾಕ್ ಲೈನ್ ವೆಂಕಟೇಶ್ ಬೆನ್ನಲ್ಲೇ ಆರ್ಯವರ್ಧನ್ ಗುರೂಜಿ ಮನೆಗಳ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ನಿವಾಸದಲ್ಲಿ ಆರ್ಯವರ್ಧನ್ ಗುರೂಜಿ ಪ್ರತಿಕ್ರಿಯೆ ನೀಡಿದ್ದು, ಹುಲಿ ಉಗುರಿನ ಪೆಂಡೆಂಟ್ ಹಾಕಿದ್ರೆ ಅಪರಾಧ ಎಂಬ ಅರಿವು ಇದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಚೇರಿಯಲ್ಲಿ ಪರಿಶೀಲಿಸಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ವೇಳೆ ಒಂದು ಡಾಲರ್ ಹಾಕಿಕೊಂಡಿದ್ದೆ ಎಂದು ತಿಳಿಸಿದರು.
ನಾನು ಕಾಳಿ ದೇವಿಯನ್ನು ಆರಾಧಿಸುತ್ತೆನೆ ಹಾಗಾಗಿ ತ್ರಿಶೂಲ ಇರುವ ಡಾಲರ್ ತರಿಸಿದ್ದೆ.ನಮ್ಮ ಕಚೇರಿ ಸಿಬ್ಬಂದಿಯನ್ನು ಮನೆಗೆ ಕಳಿಸಿ ಆ ಡಾಲರನ್ನು ತರಿಸಿದ್ದೆ. ಡಾಲರ್ ಒಳಗೆ ಪ್ಲಾಸ್ಟಿಕ್ ಪೆಂಡೆಂಟ್ ಇತ್ತು. ಅಳತೆ ಪಡೆದು ತೆರಳಿದ್ದಾರೆ ಬೆಂಗಳೂರಿನ ನಿವಾಸದಲ್ಲಿ ಆರ್ಯವರ್ಧನ್ ಗುರೂಜಿ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಸರ್ಕಾರ ವಿರುದ್ಧ ಗುಡುಗಿದ ಪ್ರಶಾಂತ್ ಸಂಬರ್ಗಿ
ಆರ್ಯವರ್ಧನ್ ಆಪ್ತ ಪ್ರಶಾಂತ್ ಸಂಬರ್ಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದುಗಳ ಮನೆ ಮೇಲೆ ದಾಳಿ ಆಗುತ್ತಿದೆ .ರಾಜ್ಯ ಸರ್ಕಾರ ಸಿಬಿಐ, ಜಾರಿ ನಿರ್ದೇಶನಲಯ ಉಪಯೋಗಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಹಿಂದು ಗೋ ರಕ್ಷಕ ವರ್ತೂರು ಸಂತೋಷ್ ಬಂಧನ ಮಾಡಿದ್ದಾರೆ. ವರ್ತೂರು ಸಂತೋಷ್ನ ಭವಿಷ್ಯ ಅಸ್ತಿತ್ವ ಹಾಳು ಮಾಡಿದ್ದಾರೆ. ಹಾಗಾದರೆ 51 ವರ್ಷದಿಂದ ಅರಣ್ಯ ಇಲಾಖೆ ಏನು ಮಾಡುತ್ತಿತ್ತು ಎಂದು ಆಕ್ರೋಶ ಹೊರ ಹಾಕಿದ್ದಾರೆ.