ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರದ ಜಿಲ್ಲಾಸ್ಪತ್ರೆಯಿಂದ ಆರು ದಿನಗಳ ಮಗುವನ್ನು ಕದ್ದೊಯ್ದಿದ್ದ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಾರ್ಡ್‌ನಲ್ಲಿ ತಾಯಿ ಮಲಗಿದ್ದ ವೇಳೆ ಮಗುವನ್ನು ಮೂವರು ಮಹಿಳೆಯರು ಬಂದು ಕದ್ದಿದ್ದಾರೆ. ಕಾಲೇಜು ಬ್ಯಾಗ್‌ನಲ್ಲಿ ಮಗುವನ್ನು ಬಚ್ಚಿಟ್ಟುಕೊಂಡು ಪರಾರಿಯಾಗಿದ್ದಾರೆ.
ಆಸ್ಪತ್ರೆಯಿಂದ ಹೊರ ಬಂದು ಆಟೋ ಹತ್ತಿ ತೆರಳಿದ್ದಾರೆ, ಇತ್ತ ಮಗುವನ್ನು ಕಳೆದುಕೊಂಡ ಪೋಷಕರ ದುಃಖ ಮುಗಿಲುಮುಟ್ಟಿತ್ತು. ಇದೀಗ ಮಗು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.