ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳಿನ ಚಂದ್ರಗ್ರಹಣ ದ್ವಾರಕಾ ತಿರುಮಲದ ಶ್ರೀವಾರಿ ಬ್ರಹ್ಮೋತ್ಸವಕ್ಕೆ ಅಡ್ಡಿಯಾಗಿದೆ. ಚಂದ್ರಗ್ರಹಣ ಹಿನ್ನೆಲೆ ಆಂಧ್ರಪ್ರದೇಶ ಏಲೂರು ಜಿಲ್ಲೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ಶನಿವಾರ (ಅಕ್ಟೋಬರ್ 28, 2023) ಮಧ್ಯಾಹ್ನ 1 ಗಂಟೆಯಿಂದ ಮುಚ್ಚಲಾಗುವುದು, ಅಲ್ಲದೆ ಬ್ರಹ್ಮೋತ್ಸವಕ್ಕೆ ಮುಂದೂಡಿರುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಮರುದಿನ ಭಾನುವಾರ ಬೆಳಿಗ್ಗೆ 4 ಗಂಟೆಗೆ ಸಂಪ್ರೋಕ್ಷಣೆ ಬಳಿಕ ಭಕ್ತರಿಗೆ ಬೆಳಿಗ್ಗೆ 6 ಗಂಟೆಯಿಂದ ದರುಶನಕ್ಕೆ ಅವಕಾಶ ನೀಡಲಾಗುತ್ತದೆ. ಶ್ರೀವಾರಿ ಆಶ್ವಿಯುಜ ಮಾಸದ ಬ್ರಹ್ಮೋತ್ಸವಗಳು ಪುನರಾರಂಭಗೊಳ್ಳಲಿವೆ.
ಗುರುವಾರ ರಾತ್ರಿ ಸ್ವಾಮಿಯ ಕಲ್ಯಾಣೋತ್ಸವ ಅದ್ಧೂರಿಯಾಗಿ ನೆರವೇರಿತು. ಗೃಹ ಸಚಿವೆ ತಾನೇಟಿ ವನಿತಾ, ಶಾಸಕ ತಲಾರಿ ವೆಂಕಟರಾವ್, ಟಿಟಿಡಿ ಸದಸ್ಯರಾದ ಮೇಕಾ ಶೇಷುಬಾಬು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಉತ್ಸವದ ನಾಲ್ಕನೇ ದಿನವಾದ ಇಂದು ರಾತ್ರಿ 7 ಗಂಟೆಗೆ ಸ್ವಾಮಿಯ ರಥೋತ್ಸವ ನಡೆಯಲಿದೆ.