ಹೊಸದಿಗಂತ ವರದಿ,ಮೈಸೂರು:
ವಿಜಯದಶಮಿ ದಿನದಂದು ನಡೆದ ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ದ ಚಿತ್ರಗಳಲ್ಲಿ ಬಹುಮಾನ ಪಡೆದ ಸ್ತಬ್ಧ ಚಿತ್ರಗಳ ವಿವರವನ್ನು ಪ್ರಕಟಿಸಲಾಗಿದೆ.
ಉತ್ತಮ ಸ್ತಬ್ಧ ಚಿತ್ರಗಳು; ಜಿಲ್ಲಾ ವಿಭಾಗದಲ್ಲಿ ಧಾರವಾಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ಚಾಮರಾಜನಗರ ಜಿಲ್ಲೆಯ ಸ್ತಬ್ದ ಚಿತ್ರಗಳು ಬಹುಮಾನ ಪಡೆದಿದೆ.
ಪ್ರೋತ್ಸಾಹದಾಯಕ ಸ್ತಬ್ಧ ಚಿತ್ರಗಳಿಗೆ ಹಾಸನ ಜಿಲ್ಲೆ, ಮಂಡ್ಯ ಜಿಲ್ಲೆ,ಶಿವಮೊಗ್ಗ ಜಿಲ್ಲೆಯ ಸ್ತಬ್ದ ಚಿತ್ರಗಳು ಆಯ್ಕೆಯಾಗಿ ಬಹುಮಾನಗಳಿಸಿವೆ.
ಇಲಾಖೆ ಹಾಗೂ ನಿಗಮಗಳ ವಿಭಾಗದಲ್ಲಿ ಉತ್ತಮ ಸ್ತಬ್ಧ ಚಿತ್ರಗಳು ವಿಭಾಗದಲ್ಲಿ
ಪ್ರವಾಸೋದ್ಯಮ ಇಲಾಖೆ,ಕಾವೇರಿ ನೀರಾವರಿ ನಿಗಮ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತಬ್ದ ಚಿತ್ರಗಳು ಆಯ್ಕೆಯಾಗಿ ಬಹುಮಾನ ಪಡೆದಿವೆ.
ಪ್ರೋತ್ಸಾಹದಾಯಕ ಸ್ತಬ್ಧ ಚಿತ್ರ ವಿಭಾಗದಲ್ಲಿ ಕರ್ನಾಟಕ ಸಹಕಾರಿ ಹಾಗೂ ಹಾಲು ಉತ್ಪಾದಕರ ಮಹಾಮಂಡಲ ನಿ. ಬಹುಮಾನಗಳನ್ನು ಪಡೆದಿವೆ ಎಂದು ದಸರಾ ಸ್ತಬ್ದ ಚಿತ್ರಗಳ ಉಪಸಮಿತಿಯ ಉಪವಿಶೇಷಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ