ಹೊಸದಿಗಂತ ವರದಿ ಹಾವೇರಿ:
ರಾಜ್ಯಾದ್ಯಂತ ಸೋಮವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತರು ದಾಳಿ ನಡೆಸಿ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ.
ಹಾವೇರಿಯಲ್ಲಿ ಸಹ ಇಬ್ಬರು ಆರ್.ಎಫ್.ಓ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ್ದು, ವಲಯ ಅರಣ್ಯಾಧಿಕಾರಿ ಪರಮೇಶಪ್ಪ ಪೇರಲನವರ್ ಮತ್ತು ಮಾಲತೇಶ ನ್ಯಾಮತಿ ಎಂಬುವರ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಹಾವೇರಿ ವರದಾನೇಶ್ವರಿ ಪಾರ್ಕ್ ಬಳಿ ಇರೋ ಮನೆ ಹಾಗೂ ಶಿವಾಜಿ ನಗರದಲ್ಲಿ ಇರೋ ಮನೆಯಲ್ಲಿ ಪರಿಶೀಲನೆ ನಡೆಸಿದ್ದು, ಪರಮೇಶಪ್ಪ ಪೇರಲನವರ್ ಮನೆಯಲ್ಲಿ ಬಂದೂಕು ಇದ್ದು ಅದಕ್ಕೆ ಲೈಸನ್ಸ್ ಕುರಿತು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪಾರ್ಮ್ ಹೌಸ್ ಸೇರಿದಂತೆ ಒಟ್ಟು 6 ಕಡೆ ದಾಳಿ ನಡೆಸಿದ್ದಾರೆ.
ಮಾಲತೇಶ ನ್ಯಾಮತಿ ವಲಯ ಅರಣ್ಯಾಧಿಕಾರಿ ಮನೆ ಕಚೇರಿ ಸೇರಿ 3 ಕಡೆ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆಯ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಈ ದಾಳಿ ನಡೆದಿದೆ.