ಚಳಿಗಾಲ ಬಂತೆಂದರೆ ಸಾಕು, ಶೀತ-ಕೆಮ್ಮಿನ ಜೊತೆಗೆ ದೇಹದ ಉಷ್ಣಾಂಶ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಈ ಸಮಯದಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡರೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಅದರಲ್ಲಿಯೂ ಹುರಿದ ಖರ್ಜೂರ ಸೇವನೆಯು ಆಯುರ್ವೇದದ ಪ್ರಕಾರ ಒಂದು ಶಕ್ತಿಶಾಲಿ ಮದ್ದು.
ಹುರಿದ ಖರ್ಜೂರ ಸೇವನೆಯಿಂದಾಗುವ ಲಾಭಗಳು:
ಹಾರ್ಮೋನುಗಳ ಸಮತೋಲನ: ಖರ್ಜೂರದಲ್ಲಿರುವ ಕಬ್ಬಿಣ ಮತ್ತು ಖನಿಜಾಂಶಗಳು ದೇಹದ ಹಾರ್ಮೋನ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.
ಫಲವತ್ತತೆ ಹೆಚ್ಚಳ: ಆಯುರ್ವೇದ ತಜ್ಞರಾದ ಡಾ. ಚಂಚಲ್ ಶರ್ಮಾ ಅವರ ಪ್ರಕಾರ, ಇದು ಪುರುಷರಲ್ಲಿ ವೀರ್ಯದ ಗುಣಮಟ್ಟ ಹೆಚ್ಚಿಸಿ ಬಂಜೆತನದ ಅಪಾಯ ಕಡಿಮೆ ಮಾಡುತ್ತದೆ. ಹಾಗೆಯೇ ಮಹಿಳೆಯರಲ್ಲಿ ಅಂಡೋತ್ಪತ್ತಿ ಪ್ರಕ್ರಿಯೆಯನ್ನು ಸುಧಾರಿಸಿ ಗರ್ಭಧಾರಣೆಗೆ ಸಹಕರಿಸುತ್ತದೆ.
ದೇಹಕ್ಕೆ ಉಷ್ಣತೆ: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಹುರಿದ ಖರ್ಜೂರ ಉತ್ತಮ ಆಹಾರ.
ತ್ವರಿತ ಶಕ್ತಿ: ದಿನವಿಡೀ ಕೆಲಸ ಮಾಡಿ ದಣಿದ ದೇಹಕ್ಕೆ ಇದು ಪೌಷ್ಟಿಕಾಂಶದ ಗಣಿಯಾಗಿ ಕೆಲಸ ಮಾಡುತ್ತದೆ.
ರಾತ್ರಿಯ ಸಮಯದಲ್ಲಿ ದೇಹವು ತನ್ನನ್ನು ತಾನು ಪುನಶ್ಚೇತನಗೊಳಿಸಿಕೊಳ್ಳುವುದರಿಂದ, ಮಲಗುವ ಮುನ್ನ ಹುರಿದ ಖರ್ಜೂರ ಸೇವಿಸುವುದು ಅತ್ಯುತ್ತಮ. ಇದನ್ನು ಲಘುವಾಗಿ ಹುರಿದು ಅಥವಾ ಬೆಚ್ಚಗಿನ ಹಾಲಿನೊಂದಿಗೆ ಸೇವಿಸಬಹುದು.

