ಹೊಸದಿಗಂತ ವರದಿ ಉಡುಪಿ:
ಮನೆಯ ಮುಂಭಾಗದ ಬಾಗಿಲಿನ ಚಿಲಕದ ಲಾಕ್ ಕತ್ತರಿಸಿ, ಮನೆಯಲ್ಲಿನ ಅಮೂಲ್ಯ ಚಿನ್ನಾಭರಣಗಳನ್ನು ಕಳವುಗೈದ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣದ ವಿವರ:
ಸುರೇಶ್ ಎಂಬವರು ತನ್ನ ಮಡದಿ, ಮಕ್ಕಳೊಂದಿಗೆ ತೀರ್ಥಕ್ಷೇತ್ರದ ಪ್ರವಾಸಕ್ಕೆಂದು ಅ. 27ರಂದು ತೆರಳಿದ್ದು, ಮನೆಯಲ್ಲಿ ಸಾಕಿರುವ ಬೆಕ್ಕಿಗೆ ಅನ್ನ ಹಾಕಲು ಮನೆಯ ಹಿಂಬದಿಯ ಮನೆಯಲ್ಲಿರುವ ಪೂರ್ಣಿಮಾ ಎಂಬುವವರಿಗೆ ಹೇಳಿದ್ದರು.
ಅ.29 ರಂದು ಸಂಜೆ 05:45 ಗಂಟೆಗೆ ದೂರುದಾರರು ವಾಪಾಸು ಮನೆಗೆ ಬಂದಾಗ, ಮನೆಯ ಬಾಗಿಲಿನ ಎದುರಿಗೆ ಚಿಲಕಕ್ಕೆ ಹಾಕಿದ ಲಾಕ್ ಕಟ್ ಆಗಿತ್ತು. ಒಳಗೆ ಹೋಗಿ ನೋಡಿದಾಗ ಮನೆಯ ಬೆಡ್ ರೂಂನಲ್ಲಿರುವ ಕಪಾಟಿನಲ್ಲಿರುವ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು, ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.
ಅ. 28 ರಿಂದು ಅ.29 ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮನೆಗೆ ನುಗ್ಗಿ ಮನೆಯೊಳಗಿನ ಕಪಾಟಿನಲ್ಲಿದ್ದ 2,34,500 ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.