ಕೇರಳ ಬಾಂಬ್ ಸ್ಫೋಟ: ಡೊಮಿನಿಕ್ ಮಾರ್ಟಿನ್ ಒಬ್ಬನಿಂದಲೇ ಕೃತ್ಯ??

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವನ್ನೇ ಬೆಚ್ಚಿಬೀಳಿಸಿರುವ ಕೇರಳದ ಕಲಮಸ್ಸೆರಿ ಬಾಂಬ್ ಸ್ಫೋಟದ ಹಿಂದೆ ಡೊಮಿನಿಕ್ ಮಾರ್ಟಿನ್ ಕೈವಾಡವಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.

ಈ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಡೊಮಿನಿಕ್ ಮಾರ್ಟಿನ್ ಬಾಂಬ್ ತಯಾರಿಕೆ ಹಾಗೂ ಸ್ಫೊಟ ಕಾರ್ಯಾಚರಣೆಯಲ್ಲಿ ತೊಡಗಿದ್ದ. ಇದಕ್ಕೆ ಈತನಿಗೆ ಬೇರೆಯವರು ನೆರವು ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೂ ವಿವಿಧ ಮಾಹಿತಿಗಳ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಪೋಲೀಸರು ಹೇಳಿದ್ದಾರೆ.

ಈ ನಡುವೆ ಇಂದು ಸಾವನ್ನಪ್ಪಿದ ಬಾಲಕಿಯ ತಾಯಿ ಮತ್ತು ಸಹೋದರನ ಸ್ಥಿತಿಯೂ ಚಿಂತಾಜನಕವಾಗಿದೆ. ಸಣ್ಣಪುಟ್ಟ ಗಾಯಗಳಾಗಿದ್ದವರನ್ನು ಕಳೆ ರಾತ್ರಿಯiಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು ಘಟನೆ ನಡೆದ ಸ್ಥಳದಲ್ಲಿ ಮೃತ ಮಹಿಳೆಯ ಸಂಬಂಧಿಯ ಡಿಎನ್‌ಎ ಪರೀಕ್ಷೆ ಕೂಡಾ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!