CINE| ಟಸ್ಕನಿಯಲ್ಲಿ ಮೆಗಾ ಕುಟುಂಬದ ಮತ್ತೊಂದು ಅದ್ದೂರಿ ಮದುವೆ, ಫೋಟೋಸ್‌ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಗಾ ಹೀರೋ ವರುಣ್ ತೇಜ್ ಮತ್ತು ನಾಯಕಿ ಲಾವಣ್ಯ ತ್ರಿಪಾಠಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಇಟಲಿಯ ಟಸ್ಕನಿಯಲ್ಲಿ ಮೆಗಾ, ಅಲ್ಲು, ಕಾಮಿನೇನಿ, ಲಾವಣ್ಯ ಫ್ಯಾಮಿಲಿ ಸೇರಿ ಹಲವು ಆಪ್ತರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದು, ನಾಲ್ಕು ದಿನಗಳ ಕಾಲ ಸಮಾರಂಭ ನಡೆಯಲಿದೆ.

ಅಕ್ಟೋಬರ್ 30 ರಂದು ನಿನ್ನೆ ರಾತ್ರಿ ಸಂಗೀತ ಮತ್ತು ಕಾಕ್ಟೈಲ್ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯ ಕೆಲವು ಫೋಟೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಲೀಕ್ ಆಗಿವೆ. ಈ ಫೋಟೋಗಳಲ್ಲಿ ಅಲ್ಲು ಅರ್ಜುನ್, ಸ್ನೇಹಾರೆಡ್ಡಿ.. ಜೊತೆಗೆ ಚರಣ್ ಮತ್ತು ಉಪಾಸನ ದಂಪತಿ ವರುಣ್ ಲಾವಣ್ಯ ಅವರನ್ನು ಅಭಿನಂದಿಸುತ್ತಿರುವ ಚಿತ್ರಗಳು ವೈರಲ್‌ ಆಗಿವೆ. ಕಳೆದ ರಾತ್ರಿ ಸಂಗೀತ ಪಾರ್ಟಿಯಲ್ಲಿ ಮೆಗಾ ಫ್ಯಾಮಿಲಿ ಸಖತ್ ಎಂಜಾಯ್ ಮಾಡಿದ್ದಾರೆ.

ಇಂದು, ಅಕ್ಟೋಬರ್ 31 ರಂದು ಬೆಳಿಗ್ಗೆ, ಹಳದಿ ಶಾಸ್ತ್ರ, ಸಂಜೆ ಮೆಹಂದಿ ಸಮಾರಂಭ, ನಾಳೆ ನವೆಂಬರ್ 1ರಂದು 2 ಗಂಟೆ 48 ನಿಮಿಷಕ್ಕೆ ಮದುವೆ, ನವೆಂಬರ್ 1 ರಂದು ರಾತ್ರಿ ಆರತಕ್ಷತೆ ನಡೆಯಲಿದೆ. ವರುಣ್ ಲಾವಣ್ಯ ಅವರ ಮದುವೆ ಸಮಾರಂಭದ ಫೋಟೋಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here