Saturday, December 27, 2025

ಆಸೀಸ್ ಅಂಗಳದಲ್ಲಿ ಆಂಗ್ಲರ ಅಟ್ಟಹಾಸ: 97 ವರ್ಷಗಳ ದಾಖಲೆ ಉಡೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ನೆಲದಲ್ಲಿ ಆಸೀಸ್ ಪಡೆಯನ್ನು ಸೋಲಿಸುವುದು ಎಂತಹ ಬಲಿಷ್ಠ ತಂಡಗಳಿಗೂ ಸವಾಲಿನ ಕೆಲಸ. ಆದರೆ ಇಂಗ್ಲೆಂಡ್ ತಂಡ ಈ ಬಾರಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ. ಬರೋಬ್ಬರಿ 14 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರಿದೆ.

ಈ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್​​ಗಳು ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಅಕ್ಷರಶಃ ನಡುಗಿಸಿದರು. ಆಸ್ಟ್ರೇಲಿಯಾ ಎರಡೂ ಇನಿಂಗ್ಸ್‌ ಸೇರಿ ಎದುರಿಸಿದ್ದು ಕೇವಲ 479 ಎಸೆತಗಳನ್ನು (79.5 ಓವರ್‌ಗಳು) ಮಾತ್ರ!

ಮೊದಲ ಇನಿಂಗ್ಸ್: 45.2 ಓವರ್‌ಗಳಲ್ಲಿ ಆಲೌಟ್.

ದ್ವಿತೀಯ ಇನಿಂಗ್ಸ್: 34.3 ಓವರ್‌ಗಳಲ್ಲಿ ಆಲೌಟ್.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡ 500 ಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡೂ ಇನಿಂಗ್ಸ್ ಮುಗಿಸಿರುವುದು ಇದು ಕೇವಲ 5ನೇ ಬಾರಿ. ಕಳೆದ 97 ವರ್ಷಗಳಲ್ಲಿ ಆಸೀಸ್ ನೀಡಿದ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ. ಇದಕ್ಕೂ ಮುನ್ನ 1928 ರಲ್ಲಿ ಇಂಗ್ಲೆಂಡ್ ವಿರುದ್ಧವೇ ಆಸ್ಟ್ರೇಲಿಯಾ 457 ಎಸೆತಗಳಲ್ಲಿ ತನ್ನ ಆಟ ಮುಗಿಸಿತ್ತು.

2011ರ ಬಳಿಕ ಆಸ್ಟ್ರೇಲಿಯಾ ಮಣ್ಣಿನಲ್ಲಿ ಇಂಗ್ಲೆಂಡ್‌ಗೆ ಗೆಲುವು ಮರೀಚಿಕೆಯಾಗಿತ್ತು. ಕಳೆದ 18 ಪಂದ್ಯಗಳಲ್ಲಿ 16ರಲ್ಲಿ ಸೋಲು ಹಾಗೂ 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದ ಇಂಗ್ಲೆಂಡ್, ಇದೀಗ 4 ವಿಕೆಟ್‌ಗಳ ಸ್ಮರಣೀಯ ಗೆಲುವು ದಾಖಲಿಸುವ ಮೂಲಕ ಕಾಂಗರೂಗಳ ಅಧಿಪತ್ಯಕ್ಕೆ ಬ್ರೇಕ್ ಹಾಕಿದೆ.

error: Content is protected !!