ಹೊಸದಿಗಂತ ವರದಿ ಆಲೂರು :
ತಾಲ್ಲೂಕಿನ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಕುಂದು-ಕೊರತೆಗಳನ್ನು ಸಂಸದ ಪ್ರಜ್ವಲ್ ರೇವಣ್ಣ ಆಲಿಸಿದರು.
ಪಾಳ್ಯ ಗ್ರಾಮ ಪಂಚಾಯಿತಿ ಆವರಣದಲ್ಲಿ ತಹಶಿಲ್ದಾರ್ ಸಿ.ಪಿ.ನಂದಕುಮಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾನಂದ್ ಅವರ ಸಮ್ಮುಖದಲ್ಲಿ ಕಾಡಾನೆ ಸಮಸ್ಯೆ,ರಾಷ್ಟ್ರೀಯ ಹೆದ್ದಾರಿ,ಎತ್ತಿನಹೊಳೆ ಯೋಜನೆ,ಆಲೂರು ಪಟ್ಟಣದ ರೈಲ್ವೇ ನಿಲುಗಡೆ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ನಟರಾಜ್ ಮಾತನಾಡಿ ಹಾಸನದಿಂದ ನೇರಲಕೆರೆ ಕೂಡಿಗೆ ಮೂಲಕ ಆಲೂರು ಪಟ್ಟಣಕ್ಕೆ ತೆರಳುವ ಸಂದರ್ಭದಲ್ಲಿ ನಿಧಾನವಾಗಿ ಚಲಿಸಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುವ ಮೂಲಕ ವಾಹನ ಮಾಲೀಕರು ಅಪಾರ ಪ್ರಮಾಣದಲ್ಲಿ ನಷ್ಟ ಹೊಂದುತ್ತೊದ್ದಾರೆ ಅದ್ದರಿಂದ ಪ್ಲೈ-ಒವರ್ ಅಥವಾ ಅಂಡರ್ ಪಾಸ್ ನಿರ್ಮಾಣವಾಗಬೇಕು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ಏಳೆಂಟು ವರ್ಷಗಳೇ ಕಳೆದಿವೆ ಇದರಿಂದ ಹೆಚ್ಚು ವಾಹನಗಳು ಅಪಘಾತಕ್ಕೀಡಗಾತ್ತಿವೆ ಅದಷ್ಟು ಬೇಗ ಕಾಮಗಾರಿ ಮುಗಿಸಿಕೋಡಬೇಕು ಎಂದು ಒತ್ತಾಯಿಸಿದರು.
ಆಲೂರು ಪಟ್ಟಣದ ಜೆಡಿಎಸ್ ಮುಖಂಡ ಯೋಗೇಶ್ ಮಾತನಾಡಿ ಆಲೂರು ಪಟ್ಟಣದ ರೈಲ್ವೇ ಸ್ಟೇಷನ್ ದೇವೇಗೌಡ್ರು ಪ್ರಧಾನಮಂತ್ರಿಗಳಾದ ಸಂದರ್ಭದಲ್ಲಿ ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಗೆ ಪರಿವರ್ತನೆಯಾದ ನಂತರ ರೈಲು ನಿಲುಗಡೆಯಾಗುತ್ತಿಲ್ಲ ಆಲೂರಿನ ಜನ ಹಲವು ಬಾರಿ ಪ್ರತಿಭಟನೆ ಮಾಡಿ ಮನವಿ ನೀಡಲಾಗಿದೆ ಅದರೆ ನೀವು ಲೋಕಸಭಾ ಸದಸ್ಯರಾಗಿ ರೈಲು ನಿಲುಗಡೆ ಸಾದ್ಯವಾಗಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ್ ಮಾತನಾಡಿ ವಾಟೆಹೊಳೆ ಹಾಗೂ ಯಗಚಿ ಜಲಾಶಯ ತಾಲ್ಲೂಕಿನಲ್ಲಿ ಹಾದು ಹೋಗಿದ್ದರು ಆಲೂರು ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿಲ್ಲ ಬೇಲೂರು ಪಟ್ಟಣದ ಯಜಿಡಿ ನೀರು ಹೋಳೆಗೆ ಹರಿದು ಬರುತ್ತಿರುವ ಕಲುಷಿತ ನೀರು ಕುಡಿಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುವಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಜ್ವಲ್ ರೇವಣ್ಣ ಮಾತನಾಡಿ ಆಲೂರು ಸೇರಿದಂತೆ ಸಕಲೇಶಪುರ,ಬೇಲೂರು ತಾಲ್ಲೂಕುಗಳಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ ಈ ಸಂಬಂಧ ಶಾಶ್ವತ ಪರಿಹಾರಕ್ಕೆ ಹಿಂದೆ ಇದ್ದ ಬಿಜೆಪಿ ಸರ್ಕಾರದ ಗಮನ ಸೆಳೆಯಲಾಗಿತ್ತು ಈಗಲೂ ಕಾಂಗ್ರೆಸ್ ಸರ್ಕಾರದ ಗಮನ ಸೆಳೆಯಲಾಗುತ್ತದೆ ಅದರೆ ಇದುವರೆವಿಗೂ ಕಾಂಗ್ರೆಸ್ ಗಡತ್ತಾಗಿ ನಿದ್ದೆ ಹೊಡೆಯುತ್ತಿದ್ದಾರೆ ಅವರಿಗೆ ಗ್ಯಾರಂಟಿ ಫುಲ್ ಫೀಲ್ ಮಾಡಲು ಸಾದ್ಯವಾಗುತ್ತಿಲ್ಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಶೇ 90 ರಷ್ಟು ಕಾಮಗಾರಿ ಮುಗಿದಿದೆ ಪ್ರಸ್ತುತ ವರ್ಷದಲ್ಲಿ ಕಾಮಗಾರಿ ಮುಗಿಯುತ್ತದೆ ಆಲೂರು-ನೇರಲಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಿಂದ ಆಲೂರು ಪಟ್ಟಣಕ್ಕೆ ಹೋಗುವ ಸಾರ್ವಜನಿಕರಿಗೆ ಪ್ಲೈ-ಒವರ್ ಮಾಡಲು ಕ್ರಮ ವಹಿಸಲಾಗಿದೆ ಆಲೂರು ಪಟ್ಟಣದಲ್ಲಿ ರೈಲ್ವೇ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಹಿಂದೆ ಇದ್ದ ರೈಲ್ವೇ ಮಂತ್ರಿ ಫೀಯೂಶ್ ಗೋಯಲ್ ಅವರಿಗೆ ಸಂಪೂರ್ಣ ವರದಿ ನೀಡಲಾಗಿತ್ತು ಇತ್ತೀಚೆಗೆ ಅವರ ಖಾತೆ ಬದಲಾವಣೆ ಆಗಿದ್ದರಿಂದ ತಡವಾಗಿದೆ ಮುಂದಿನ ದಿನಗಳಲ್ಲಿ ರೈಲು ನಿಲುಗಡೆಗೆ ಕ್ರಮ ವಹಿಸಲಾಗುವುದು ಎತ್ತಿನ ಹೊಳೆ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ ನನ್ನ ಸಂಸದ ಅವದಿಯಲ್ಲಿ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ ನನ್ನ ರಾಜಕೀಯ ವಿರೋಧಿಗಳು ಪ್ರಜ್ವಲ್ ರೇವಣ್ಣ ಏನು ಮಾಡಿದ್ದಾರೆ ಎನ್ನುವವರಿಗೆ ಪುಸ್ತಕ ಹೊರತಂದು ಉತ್ತರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ,ತಹಶಿಲ್ದಾರ್ ನಂದಕುಮಾರ್,ಇಒ ದಯಾನಂದ್,ಬಿಇಒ ಕೃಷ್ಣೇಗೌಡ,ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಹಾಯಕ ನಿರ್ದೇಶಕ ರವಿ,ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೇಶವ್,ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಮೇಶ್,ಪಿಡಿಒ ದನಂಜಯ್,ಮಾಜಿ ಅಧ್ಯಕ್ಷ ಪ್ರಕಾಶ್,ಕಲ್ಯಾಣ ಕುಮಾರ್, ಸೇರಿದಂತೆ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.