ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಟೂರ್ನಿಯಲ್ಲಿಂದು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಡುತ್ತಿವೆ. ಈ ಪಂದ್ಯದಲ್ಲಿ ಪಾಕಿಸ್ತಾನದ ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ, ಏಕದಿನ ಕ್ರಿಕೆಟ್ನಲ್ಲಿ ಅತಿವೇಗವಾಗಿ 100 ವಿಕೆಟ್ ಕಬಳಿಸಿದ ವೇಗಿ ಎನ್ನುವ ಅಪರೂಪದ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಅವರನ್ನು ಬಲಿಪಡೆಯುವುದರ ಮೂಲಕ ಶಾಹೀನ್ ಅಫ್ರಿದಿ, ಏಕದಿನ ಕ್ರಿಕೆಟ್ನಲ್ಲಿ 100 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಶಾಹೀನ್ ಅಫ್ರಿದಿ ಕೇವಲ 51ನೇ ಪಂದ್ಯವನ್ನಾಡಿ 100 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಈ ಮೊದಲು ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ 52 ಪಂದ್ಯಗಳನ್ನಾಡಿ ನೂರು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು.
ಏಕದಿನ ಕ್ರಿಕೆಟ್ನಲ್ಲಿ ಅತಿವೇಗವಾಗಿ 100 ಕಬಳಿಸಿದ ಟಾಪ್ 5 ವೇಗಿಗಳಿವರು
1. ಶಾಹೀನ್ ಅಫ್ರಿದಿ: 51 ಪಂದ್ಯ
2. ಮಿಚೆಲ್ ಸ್ಟಾರ್ಕ್: 54 ಪಂದ್ಯ
3. ಶೇನ್ ಬಾಂಡ್: 54 ಪಂದ್ಯ
4. ಮುಸ್ತಾಫಿಜುರ್ ರೆಹಮಾನ್: 54 ಪಂದ್ಯ
5. ಬ್ರೆಟ್ ಲೀ: 55 ಪಂದ್ಯ
ಶಾಹೀನ್ ಅಫ್ರಿದಿಗೂ ಮುನ್ನ ನೇಪಾಳದ ಸಂದೀಪ್ ಲಾಮಿಚ್ಚಾನೆ ಹಾಗೂ ಆಫ್ಘಾನಿಸ್ತಾನದ ರಶೀದ್ ಖಾನ್ ಅತಿವೇಗವಾಗಿ ಏಕದಿನ ಕ್ರಿಕೆಟ್ನಲ್ಲಿ 100 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಸಂದೀಪ್ ಲಾಮಿಚ್ಚಾನೆ 42 ಪಂದ್ಯಗಳಲ್ಲಿ 100 ವಿಕೆಟ್ ಕಬಳಿಸಿದರೆ, ರಶೀದ್ ಖಾನ್ 44 ಪಂದ್ಯಗಳನ್ನಾಡಿ 100 ವಿಕೆಟ್ ಕಬಳಿಸಿದ್ದಾರೆ. ಲಾಮಿಚ್ಚಾನೆ ಹಾಗೂ ರಶೀದ್ ಖಾನ್ ಬಳಿಕ ಏಕದಿನ ಕ್ರಿಕೆಟ್ನಲ್ಲಿ 100 ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನ್ನುವ ಕೀರ್ತಿಗೆ ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಅಫ್ರಿದಿ ಪಾತ್ರರಾಗಿದ್ದಾರೆ.