ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾಪಟ್ಟಿಯಲ್ಲಿ ಹಮಾಸ್ ಉಗ್ರರನ್ನು ಓಡಿಸಲು ಪಣತೊಟ್ಟಿರುವ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಹಮಾಸ್ ಕಮಾಂಡರ್ ಸೇರಿ 50 ಮಂದಿ ಮೃತಪಟ್ಟಿದ್ದಾರೆ.
ಮೊದಲು ಗಾಜಾದಲ್ಲಿರುವ ಹಮಾಸ್ ಸ್ಥಾನಗಳ ಮೇಲೆ ನಿರಂತರವಾಗಿ ಬಾಂಬ್ ದಾಳಿ ನಡೆಸಿದ್ದು, ನಂತರ ನೆಲದ ಪಡೆ ತನ್ನ ಕಾರ್ಯಾಚರಣೆ ಆರಂಭಿಸಿದೆ. ಈ ಕಾರ್ಯಾಚರಣೆ ಹಾಗೂ ಬಾಂಬ್ ದಾಳಿ ಸೇರಿ ಒಟ್ಟಾರೆ 50 ಮಂದಿ ಮೃತಪಟ್ಟಿದ್ದಾರೆ.
ಅ.7ರಂದು ಇಸ್ರೇಲ್ ಮೇಲೆ ಹಮಾಸ್ ಭೀಕರ ರಾಕೆಟ್ ದಾಳಿ ನಡೆಸಿತ್ತು. ಈ ದಾಳಿಯ ಹಿಂದಿದ್ದ ಕಮಾಂಡರ್ ನಿಸಾಮ್ ಅಬು ಅಜಿನಾ ಹತ್ಯೆ ಮಾಡಲಾಗಿದೆ. ಅಜೀನಾ ಹತ್ಯೆಯಿಂದಾಗಿ ಹಮಾಸ್ ದುರ್ಬಲವಾಗುವ ಸಾಧ್ಯತೆ ಇದೆ.
ಈಗಾಗಲೇ ಇಸ್ರೇಲ್ ಹಮಾಸ್ ಯುದ್ಧ ಭೀಕರ ಹಂತ ತಲುಪಿದ್ದು, ಸಾವಿರಾರು ಮಂದಿ ಪ್ರಾಣತೆತ್ತಿದ್ದಾರೆ. ಕಟ್ಟಗಳು ಉರುಳಿದ್ದು, ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ. ಕದನ ವಿರಾಮ ನೀಡುವ ಬಗ್ಗೆಯೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾತನಾಡಿದ್ದು, ಯುದ್ಧ ಗೆಲ್ಲುವವರೆಗೂ ಯಾವುದೇ ವಿರಾಮ ಇಲ್ಲ ಎಂದು ಹೇಳಿದ್ದಾರೆ.