ಬೆಳಗಾವಿಯಲ್ಲಿ ಶಿವಸೇನೆ ಉದ್ದಟನತ, ಗಡಿ ಪ್ರವೇಶಕ್ಕೆ ಯತ್ನಿಸಿದವರು ಪೊಲೀಸ್‌ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿವರ್ಷ ನವೆಂಬರ್‌ 1ಕನ್ನಡ ರಾಜ್ಯೋತ್ಸವದಂದು ಮಹಾರಾಷ್ಟ್ರದಿಂದ ಕ್ಯಾತೆ ತಪ್ಪಿದ್ದಲ್ಲ. ಬೆಳಗಾವಿ ಗಡಿಯಲ್ಲಿ ಶಿವನಸೇನೆ ಪುಂಡಾಟ ಹೊಸತೂ ಅಲ್ಲ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಪ್ರತಿವರ್ಷ ಕರಾಳ ದಿನಾಚರಣೆ ಆಚರಿಸಲು ಹೊಂಚು ಹಾ ಕುತ್ತಿರುತ್ತಾರೆ. ಹಾಗೆಯೇ ಈ ವರ್ಷವೂ ಬೆಳಗಾವಿ ಗಡಿ ಪ್ರವೇಶಿಸಲು ಯತ್ನಿಸಿದ ಶಿವಸೇನೆ ಪುಂಡರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದರು.

ಕರ್ನಾಟಕ-ಮಹಾರಾಷ್ಟ್ರ ಗಡಿ ಕೊಗನೊಳ್ಳಿಯಲ್ಲಿ ಶಿವಸೇನೆ ಉದ್ಧವ್‌ ಠಾಕ್ರೆ ಬಣ ರಸ್ತೆ ತಡೆ ನಡೆಸಿ, ಅರ್ಧ ಗಂಟೆಗೂ ಹೆಚ್ಚು ಕಾಲ ಕರ್ನಾಟಕದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಬೆಳಗಾವಿ ಸೇರಿದಂತೆ ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕೆಂದು ಆಗ್ರಹಿಸಿದರು.

 ಗಡಿಯಲ್ಲಿ ಹೈಡ್ರಾಮಾ ಸೃಷ್ಟಿಸಿದ ಠಾಕ್ರೆ ಬಣದ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು. ಪ್ರತಿವರ್ಷ ಕಾಲುಕೆರೆದುಕೊಂಡು ಗಲಾಟೆ ಮಾಡುವ ಶಿವಸೇನೆ ಪುಂಡರು ಈ ವರ್ಷ ಗಡಿ ಪ್ರವೇಶಿದಂತೆ ನಿಷೇಧಿಸಲಾಗಿದೆ. ನಿಯಮ ಮೀರಿ ನಡೆದುಕೊಂಡವರ ವಿರುದ್ಧ ಬೆಳಗಾವಿ ಪೊಲೀಸರು ಕ್ರಮ ತಗೆದುಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!