ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ವಾಂಖೆಡೆ ಮತ್ತು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ (ನ.2) ಮತ್ತು ಸೋಮವಾರ (ನ.6) ಎಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಪಟಾಕಿ ಬಳಸುವುದನ್ನು ಬಿಸಿಸಿಐ (BCCI) ನಿಷೇಧಿಸಿದೆ.
ಬಾಂಬೆ ಹೈಕೋರ್ಟ್ ಮುಂಬೈನ (Mumbai) ವಾಯು ಗುಣಮಟ್ಟವನ್ನು (Air Quality) ಗಮನಿಸಿ ಸ್ವಯಂಪ್ರೇರಿತವಾಗಿ ವಿಚಾರಣೆ ಪ್ರಾರಂಭಿಸಿದ ಬಳಿಕ ಬಿಸಿಸಿಐ (BCCI) ಈ ನಿರ್ಧಾರ ಪ್ರಕಟಿಸಿದೆ.
ಮುಂಬೈ ಮತ್ತು ದೆಹಲಿಯಲ್ಲಿ (New Delhi) ವಾಯು ಗುಣಮಟ್ಟ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಈ ನಗರಗಳಲ್ಲಿ ನಡೆಯಲಿರುವ ಪಂದ್ಯಗಳ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ದೂರವುಳಿಯಲು ಬಿಸಿಸಿಐ ನಿರ್ಧರಿಸಿದೆ ಎಂದು ಕಾರ್ಯದರ್ಶಿ ಜಯ್ ಶಾ ಪ್ರತಿಕಾ ಹೇಳಿಕೆ ನೀಡಿದ್ದಾರೆ.
ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ (Team India), ಶ್ರೀಲಂಕಾ ವಿರುದ್ಧ, ಸೋಮವಾರ ದೆಹಲಿಯ ಅರನ್ ಜೇಟ್ಲಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ (Sri Lanka) ತಂಡಗಳು ಮುಖಾಮುಖಿಯಾಗಲಿವೆ.
ಈ ವಿಷಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಲಾಗಿದೆ. ಮುಂಬೈ ಮತ್ತು ದೆಹಲಿಯಲ್ಲಿ ಯಾವುದೇ ಪಟಾಕಿ ಪ್ರದರ್ಶನ ಇರುವುದಿಲ್ಲ. ಪಟಾಕಿ ಸಿಡಿಸುವುದರಿಂದ ಮಾಲಿನ್ಯದ ಮಟ್ಟ ಹೆಚ್ಚಾಗಬಹುದು. ಆದ್ದರಿಂದ ಮಂಡಳಿಯು ಪರಿಸರ ಮಾಲಿನ್ಯದ ಸಮಸ್ಯೆಗಳ ಬಗ್ಗೆ ಸೂಕ್ಷ್ಮತೆ ಹೊಂದಿದೆ ಎಂದು ಜಯ್ ಶಾ ತಿಳಿಸಿದ್ದಾರೆ.
ಕ್ರಿಕೆಟ್‌ನ ಸಂಭ್ರಮಾಚರಣೆಗೆ ಸೂಕ್ತವಾದ ರೀತಿಯಲ್ಲಿ ಐಸಿಸಿ ವಿಶ್ವಕಪ್ (ICC World) ಆಯೋಜಿಸಲು ನಾವು ಶ್ರಮಿಸುತ್ತೇವೆ. ಹಾಗೆಯೇ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಇದಕ್ಕೆ ಸಾರ್ವಜನಿಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದತ್ತಾಂಶದ ಪ್ರಕಾರ, ಮಂಗಳವಾರ ಮುಂಬೈನಲ್ಲಿ ಗಾಳಿಯ ಗುಣಮಟ್ಟದ ಎಕ್ಯೂಐ (AQI) ರೀಡಿಂಗ್ 172 (ಮಧ್ಯಮ) ಆಗಿದ್ದು, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ 260ರ ಆತಂಕಕಾರಿ ಮಟ್ಟವನ್ನು ಮುಟ್ಟಿದೆ. ದೆಹಲಿಯಲ್ಲಿ, ಈ ಅಕ್ಟೋಬರ್‌ನ ಗಾಳಿಯ ಗುಣಮಟ್ಟವು 2020ರಿಂದ ಕೆಟ್ಟದ್ದಾಗಿದೆ.
ಏಕದಿನ ವಿಶ್ವಕಪ್ ಪಂದ್ಯಗಳ ವೇಳೆ ಪಟಾಕಿ ಸಿಡಿಸುವುದು ಸಂಭ್ರಮದ ಒಂದು ಭಾಗವಾಗಿದೆ. ಲೈಟ್ ಶೋ, ಸಿಡಿಮದ್ದಿನ ಪ್ರದರ್ಶನ ಸಾಕಷ್ಟು ಗಮನ ಸೆಳೆಯುತ್ತದೆ. ಆದ್ರೆ ಬಾಂಬೆ ಹೈಕೋರ್ಟ್ ಮಂಗಳವಾರ ಮುಂಬೈನಲ್ಲಿ ಹದಗೆಡುತ್ತಿರುವ ವಾಯು ಗುಣಮಟ್ಟ ಸೂಚ್ಯಂಕದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಈ ಸಮಸ್ಯೆಯ ಬಗ್ಗೆ ಸ್ವಯಂಪ್ರೇರಿತವಾಗಿ (ಸ್ವತಃ) ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಈ ಬೆನ್ನಲ್ಲೇ ಬಿಸಿಸಿಐ ಪಟಾಕಿ ಸಿಡಿಸುವುದನ್ನು ಬ್ಯಾನ್ ಮಾಡಿದೆ