ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಜನ್ಮದಿನ, ಶಾರುಖ್ ಮನೆ ಮನ್ನತ್ ಮುಂದೆ ಲಕ್ಷಾಂತರ ಅಭಿಮಾನಿಗಳು ಬಂದು ನಿಂತಿದ್ದು, ಪೊಲೀಸ್ ಸರ್ಪಗಾವಲು ನಿಯೋಜನೆಯಾಗಿದೆ.
ಪ್ರತೀ ವರ್ಷವೂ ಶಾರುಖ್ ಜನ್ಮದಿನದಂದು ಸಾಕಷ್ಟು ಅಭಿಮಾನಿಗಳು ಆಗಮಿಸಿ ಶುಭಕೋರುತ್ತಾರೆ, ಶಾರುಖ್ ಮನೆಯ ಟೆರೇಸ್ ಮೇಲೆ ನಿಂತು ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾರೆ.
ವರ್ಷವೂ ಮಧ್ಯರಾತ್ರಿಯೇ ಅಭಿಮಾನಿಗಳತ್ತ ಶಾರುಖ್ ಕೈ ಬೀಸಿ ಮಾತನಾಡಿಸಿದ್ದು, ಬೆಳಗ್ಗೆಯಿಂದ ಮನೆಯ ಮುಂದೆ ಅಭಿಮಾನಿಗಳು ಸಾಲು ಸಾಲಾಗಿ ನಿಂತಿದ್ದಾರೆ.