12 ವರ್ಷದ ಬಾಲಕನಿಂದ ಕೇರಳ ಸಿಎಂಗೆ ಕೊಲೆ ಬೆದರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

12 ವರ್ಷದ ಬಾಲಕನೊಬ್ಬರ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಕೊಲೆ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಬಾಲಕ ಕೇರಳ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರು ಬಾಲಕನನ್ನು ಪತ್ತೆಹಚ್ಚಿ ಆತನ ಮನೆಗೆ ಭೇಟಿ ನೀಡಿದ್ದು, ಪೋಷಕರು ಮಗ ಗೊತ್ತಿಲ್ಲದೇ ಆಟ ಆಡುವ ವೇಳೆ ಕರೆ ಮಾಡಿದ್ದಾನೆ, ಅವನನ್ನು ಕ್ಷಮಿಸಿ ಎಂದು ಕೋರಿದ್ದಾರೆ.

ಆದರೆ ಆಟವಾಡುತ್ತಾ ಕಂಟ್ರೋಲ್ ರೂಮ್‌ಗೆ ಕರೆ ಮಾಡಬಹುದು, ಆದರೆ ಇಂಥವರನ್ನೇ ಕೊಲ್ಲುತ್ತೇನೆ ಎಂದು ಹೇಳುವುದು ಹುಡುಗಾಟವಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದು, ಸಿಎಂ ಭದ್ರತೆಯನ್ನೂ ಹೆಚ್ಚು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!