ಗಾಜಾ,ಪ್ಯಾಲೆಸ್ತೇನ್‌ ಜನರ ಪರ ಧ್ವನಿ ಎತ್ತಿದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಇದೇ ಮೊದಲ ಬಾರಿ ಗೆ ಇಸ್ರೇಲ್‌-ಹಮಾಸ್‌ ನಡುವಿನ ಯುದ್ಧದ ಬಗ್ಗೆ ಮಾತನಾಡಿದ್ದಾರೆ.

ಇಸ್ರೇಲ್‌ ದಾಳಿಯಿಂದ ಸಂತ್ರಸ್ತರಾಗಿರುವ ಗಾಜಾ ಹಾಗೂ ಪ್ಯಾಲೆಸ್ತೇನ್‌ ನಾಗರೀಕರ ಪರವಾಗಿ ಅವರು ಧ್ವನಿ ಎತ್ತಿದ್ದು, ಇನ್ಸ್‌ಟಾಗ್ರಾಮ್‌ನಲ್ಲಿ ಕೆಲವು ಸ್ಟೋರಿಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಸ್ಟೋರಿಯಲ್ಲಿ ಸಾನಿಯಾ ಮಿರ್ಜಾ ಗಾಜಾದಲ್ಲಿ ಇಸ್ರೇಲ್‌ನ ದಾಳಿಯಿಂದಾಗಿ ಗಾಯಗೊಂಡು ಬಳಲುತ್ತಿರುವ ಜನರಿಗೆ ಆಹಾರ, ನೀರು ಹಾಗೂ ವಿದ್ಯುತ್‌ ಸಂಪರ್ಕವನ್ನು ನಿಲ್ಲಿಸಿರುವ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಯಾರ ಪರ ನಿಂತರೂ ಪರವಾಗಿಲ್ಲ ಕನಿಷ್ಠ ಮಾನವೀಯತೆಯಾದರೂ ಇರಬೇಕು ಎಂದು ಅವರು ಬರೆದುಕೊಂಡಿದ್ದಾರೆ.

ಬಾಂಬ್ ದಾಳಿ ನಡೆಯುತ್ತಿರುವುದು ಬಹಳ ವಿಚಿತ್ರವಾಗಿದೆ. ಆದರೆ, ಅವರ ನಂಬಿಕೆ ಬೆಟ್ಟದಷ್ಟು ಗಟ್ಟಿಯಾಗಿದೆ. ನಮ್ಮ ಮನೆಯಲ್ಲಿ ಮಲಗಿದಾಗ ನಮ್ಮ ನಂಬಿಕೆ ಬುಡಮೇಲಾಗಿದೆ ಎಂದು ಅವರು ಒಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾಋಏ. ಇದರ ಹೊರತಾಗಿ ಸಾನಿಯಾ ತಮ್ಮ ಮತ್ತೊಂದು ಸ್ಟೋರಿಯಲ್ಲಿ, ನೀವು ಯಾವ ಕಡೆ ಇದ್ದೀರಿ, ನಿಮ್ಮ ರಾಜಕೀಯ ದೃಷ್ಟಿಕೋನ ಏನು ಎಂಬುದು ಮುಖ್ಯವಲ್ಲ. ಆದರೆ 20 ಲಕ್ಷಕ್ಕೂ ಹೆಚ್ಚು ಮುಗ್ಧ ಜನಸಂಖ್ಯೆಯ ನಗರಕ್ಕೆ ಆಹಾರ, ನೀರು ಮತ್ತು ವಿದ್ಯುತ್ ಕಡಿತಗೊಳಿಸುವ ಸುದ್ದಿಯನ್ನು ನೀವು ಈಗಾಗಲೇ ಕೇಳಿದ್ದೀರಿ. ಈ ವಿಷಯವನ್ನು ನಾವು ಒಪ್ಪಬಹುದೇ? ಅವರು ಎಲ್ಲಿಯೂ ಹೋಗಲಾಗದ ಜನರು, ಬಾಂಬ್ ದಾಳಿಯ ಸಮಯದಲ್ಲಿ ಅವರಿಗೆ ಅಡಗಿಕೊಳ್ಳಲು ಸ್ಥಳಗಳೂ ಅವರಿಗಿಲ್ಲ ಮತ್ತು ಅವರ ಜನಸಂಖ್ಯೆಯ ಅರ್ಧದಷ್ಟು ಜನರು ಮಕ್ಕಳಾಗಿದ್ದರೆ. ಇದು ಮಾತನಾಡಲು ಯೋಗ್ಯವಾದ ಮಾನವೀಯ ಬಿಕ್ಕಟ್ಟು ಅಲ್ಲವೇ?’ ಎಂದು ಸಾನಿಯಾ ಪ್ರಶ್ನೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!