ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢದ ಕಾನ್ಕೇರ್‌ನಲ್ಲಿ ಆಯೋಜಿಸಿದ ಬೃಹತ್ ಸಮಾವೇಶದಲ್ಲಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಭಾಷಣದ ವೇಳೆ ಬಾಲಕಿಯೊಬ್ಬಳಿಗೆ ಭರ್ಜರಿ ಉಡುಗೊರೆಯನ್ನು ಪ್ರಧಾನಿ ಘೋಷಿಸಿದ್ದಾರೆ.
ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದ ವೇಳೆ ಚಿತ್ರಬಿಡಿಸಿ ಸಮಾವೇಶಕ್ಕೆ ಆಗಮಿಸಿದ ಬಾಲಕಿಯನ್ನು ಮೋದಿ ಗುರುತಿಸಿದ್ದು, ಆಕೆಯಿಂದ ಆ ಚಿತ್ರವನ್ನು ಪಡೆದಿದ್ದಾರೆ. ಜೊತೆಗೆ ಚಿತ್ರದ ಕೆಳಗೆ ಬಾಲಕಿಗೆ ಹೆಸರು ಬರೆದು , ವಿಳಾಸ ಬರೆಯುವಂತೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಅಭಿನಂದನಾ ಪತ್ರ ಬರೆಯುವುದಾಗಿ ಮೋದಿ ಹೇಳಿದ್ದಾರೆ.
ಕಾನ್ಕೇರ್ ಸಮಾವೇಶದಲ್ಲಿ ಕಿಕ್ಕಿರಿದು ಜನ ತುಂಬಿದ್ದರು. ಈ ನಡುವೆ ಬಾಲಕಿಯೊಬ್ಬಳು ಮೋದಿ ಚಿತ್ರ ಬಿಡಿಸಿ ಇರುವುದನ್ನು ಪ್ರಧಾನಿ ಗುರುತಿಸಿದ್ದಾರೆ.ಬಾಲಕಿ ಕುರಿತು ಮಾತನಾಡಿದರು.
बेटी मैं तुम्हें आशीर्वाद देता हूं…
अपना पता लिख देना,
मैं तुझे जरूर चिट्ठी लिखूंगा! pic.twitter.com/8RKEvuQ8NV— BJP (@BJP4India) November 2, 2023
‘ಮಗಳೇ ನಾನು ನಿನ್ನ ಕಲೆಯನ್ನು ಗುರುತಿಸಿದ್ದೇನೆ. ಇಂತಹ ಉತ್ತಮ ಹಾಗೂ ಸುಂದರ ಚಿತ್ರ ಬಿಡಿಸಿ ಈ ಸಮಾವೇಶಕ್ಕೆ ಆಗಮಿಸಿದ್ದಿ. ನಾನು ನಿನಗೆ ಆಶೀರ್ವಾದ ಮಾಡುತ್ತಿದ್ದೇನೆ. ಮಗಳೇ ನೀನು ಏಷ್ಟು ಸಮಯದಿಂದ ಈ ರೀತಿ ನಿಂತುಕೊಂಡೇ ಇದ್ದಿ. ಕೈಗಳು ಸೋತು ಹೋಗಲಿದೆ. ನನ್ನ ಪೊಲೀಸ್ ಮಿತ್ರರೆ, ನನಗೆ ಬಾಲಕಿ ಬಿಡಿಸಿರುವ ಚಿತ್ರವನ್ನು ಕಳುಹಿಸಿ. ಈ ಚಿತ್ರದಲ್ಲಿ ಹೆಸರು ವಿಳಾಸ ಬರೆದು ಕಳುಹಿಸಿ. ಶೀಘ್ರದಲ್ಲೇ ನಾನು ಅಭಿನಂದನಾ ಪತ್ರ ಬರೆಯುತ್ತೇನೆ’ ಎಂದು ಮೋದಿ ಹೇಳಿದ್ದಾರೆ.