ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರ ರಚನೆಯಾಗಿ ಐದು ತಿಂಗಳಲ್ಲೇ ಕಾಂಗ್ರೆಸ್‌ನಲ್ಲಿ ನಾನೇ ಸಿಎಂ ಮಂತ್ರ ಪಠಣೆ ಶುರುವಾಗಿದೆ. ಸಿಎಂ ಆಗಿ ನಾನೇ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದಾಗಿನಿಂದಲೂ ಒಬ್ಬೊಬ್ಬೊರೇ ʻನಾನು ಸಿಎಂʼ ಅಂತಿದಾರೆ. ಹೈಕಮಾಂಡ್ ಹೇಳಿದ್ರೆ ನಾನು ಸಿಎಂ ಆಗ್ತೀನಿ ಎಂದಿದ್ದರು ಪ್ರಿಯಾಂಕ್ ಖರ್ಗೆ. ಇದೀಗ ನಾನು ಸಿಎಂ ಸಾಲಿನಲ್ಲಿ ಆರ್.ಬಿ.ತಿಮ್ಮಾಪುರ ಕೂಡ ಸೇರಿದ್ದಾರೆ.
ಬಾಗಲಕೋಟೆಯ ಕಂಕನವಾಡಿ ಗ್ರಾಮದಲ್ಲಿ ರೈತರು ನಿರ್ಮಿಸಿದ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ಮಾತನಾಡಿದ ತಿಮ್ಮಾಪುರ, ಸಿಎಂ ಹುದ್ದೆ ಕೊಡ್ತಾರೆ ಅಂದ್ರೆ ಯಾರು ಬೇಡ ಅಂತಾರೆ, ನಾನೂ ಸಿಎಂ ಆಗ್ತೀನಿ ಎಂದರು. ಮುಖ್ಯಮಂತ್ರಿ ಆಗೋಕೆ ನನಗೂ ಆಸೆ ಇರಲ್ವಾ? ಯಾಕೆ ನಾನು ಸಿಎಂ ಆಗಬಾರದಾ? ಎಂದು ಪ್ರಶ್ನಿಸಿದರು.