ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸಿಎಂ ಕುರ್ಚಿ ಕಾದಾಟ ಹಾಗೂ ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಬೆಂಬಲಿಗರ ನಡುವಿನ ಬಣ ಬಡಿದಾಟ, ಪರ, ವಿರೋಧ ಅಭಿಪ್ರಾಯಗಳ ನಡುವೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ ಕೋಡಿ ಶ್ರೀಗಳು, ಹಾಲುಮತ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳೊದು ಅಷ್ಟು ಸುಲಭವಲ್ಲ, ಕಷ್ಟ ಕಷ್ಟ ಎಂದಿದ್ದಾರೆ.
ತಾನಾಗಿಯೇ ಸಿದ್ದರಾಮಯ್ಯ ಮುಖ್ಯಮಂತ್ರಿ ಅಧಿಕಾರ ಬಿಟ್ಟು ಕೊಟ್ರೇ ಮಾತ್ರ ಬೇರೆಯರಿಗೆ ಅವಕಾಶ ಸಿಗಬಹುದು ಎಂದಿದ್ದಾರೆ.
ಸಿದ್ದರಾಮಯ್ಯ ತಾನೇ ಅಧಿಕಾರ ಬಿಟ್ಟು ಕೊಡುವವರೆಗೂ ಡಿಕೆಶಿಗೆ ಅಧಿಕಾರ ಸಿಗೊದಿಲ್ಲ ಅಂತ ಪರೋಕ್ಷವಾಗಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವ ಡಿಕೆ ಶಿವಕುಮಾರ್ಗೆ ಕೋಡಿ ಶ್ರೀ ಭವಿಷ್ಯ ನಿರಾಸೆ ಮೂಡಿಸಿದೆ.

