ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್‌ಗೆ ಗುಜರಾತಿನ ಕಚ್ಛ್ ಕ್ಷೇತ್ರದ ಭುಜ್‌ನಲ್ಲಿ ಇಂದು ಚಾಲನೆ ದೊರೆತಿದೆ. ಸರಸಂಘಚಾಲಕ ಡಾ. ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಬೈಠಕ್‌ಗೆ ಚಾಲನೆ ನೀಡಿದರು.
ಇಂದಿನಿಂದ ಎರಡು ದಿನಗಳ ಕಾಲ, (ನವೆಂಬರ್ 5ರಿಂದ 7)ರವರೆಗೆ ನಡೆಯಲಿರುವ ಈ ಬೈಠಕ್‌ನಲ್ಲಿ ಸಂಘದ 45 ಪ್ರಾಂತಗಳ ಪ್ರಾಂತ ಸಂಘಚಾಲಕರು, ಕಾರ್ಯವಾಹರು, ಪ್ರಾಂತ ಪ್ರಚಾರಕರು ಮತ್ತು ಪ್ರಾಂತ ಸಹ ಸಂಘಚಾಲಕರು, ಸಹ ಕಾರ್ಯವಾಹರು, ಸಹ ಪ್ರಾಂತ ಪ್ರಚಾರಕರು ಭಾಗವಹಿಸಲಿದ್ದಾರೆ.