ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಡೀಫ್ಫೇಕ್ ವಿಡಿಯೋಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ವಿಡಿಯೋವೊಂದು ವೈರಲ್ ಆಗಿದ್ದು,ಬಟ್ಟೆಯ ಬಗ್ಗೆ ಕೆಟ್ಟ ರೀತಿಯ ಕಮೆಂಟ್ಗಳು ಬಂದಿದ್ದವು. ಅಸಲಿಗೆ ಅದು ರಶ್ಮಿಕಾ ಅಲ್ಲ, ಮತ್ಯಾರದ್ದೋ ದೇಹಕ್ಕೆ ರಶ್ಮಿಕಾ ಮುಖವನ್ನು ಅಟ್ಯಾಚ್ ಮಾಡಿ ವಿಡಿಯೋ ಮಾಡಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಫೇಕ್ ವಿಡಿಯೋಗಳು ನಿಜಕ್ಕೆ ತೀರಾ ಸಮೀಪವಿದ್ದು, ಕೆಲವರಿಗೆ ಇದು ಫೇಕ್ ಎಂದು ತಿಳಿಯಲೂ ಆಗುವುದಿಲ್ಲ ಹಾಗಾಗಿ ಕ್ರಮಕ್ಕೆ ಮುಂದಾಗಬೇಕು. ಇದರಿಂದ ಸಾಕಷ್ಟು ಮುಗ್ಧರಿಗೆ ಸಮಸ್ಯೆಯಾಗಲಿದೆ ಎಂದು ನೆಟ್ಟಿಗರು ದೂರಿದ್ದಾರೆ.
🚨 There is an urgent need for a legal and regulatory framework to deal with deepfake in India.
You might have seen this viral video of actress Rashmika Mandanna on Instagram. But wait, this is a deepfake video of Zara Patel.
This thread contains the actual video. (1/3) pic.twitter.com/SidP1Xa4sT
— Abhishek (@AbhishekSay) November 5, 2023