ಗಾಜಾ ನಗರವನ್ನೇ ವಿಭಜಿಸಿದ ಇಸ್ರೇಲ್, ಎರಡೂ ನಗರಗಳ ಮಧ್ಯೆ ಸಂಪರ್ಕವೇ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಮಾಸ್ ಉಗ್ರರನ್ನು ಹತ್ತಿಕ್ಕುವ ಗುರಿ ಹೊಂದಿರುವ ಇಸ್ರೇಲ್ ಗಾಜಾ ಮೇಲೆ ದಾಳಿಯನ್ನು ಮುಂದುವರಿಸಿದೆ. ಇದರ ಬೆನ್ನಲ್ಲೇ ಗಾಜಾ ನಗರವನ್ನು ಎರಡು ಭಾಗವನ್ನಾಗಿ ಇಸ್ರೇಲ್ ವಿಭಜನೆ ಮಾಡೊದೆ.

ಈ ಬಗ್ಗೆ ಇಸ್ರೇಲ್ ಸೇನೆ ಘೋಷಣೆ ಮಾಡಿದ್ದು, ಇದು ಅತ್ಯಂತ ಪ್ರಮುಖ ಘಟ್ಟವಾಗಿದೆ, ದಾಳಿ ಇನ್ನಷ್ಟು ತೀವ್ರವಾಗಿರಲಿದೆ ಎಂದು ಹೇಳಿದೆ.

ಈಗಾಗಲೇ ಐಡಿಎಫ್ ದಕ್ಷಿಣ ಗಾಜಾ ಪ್ರಾಂತ್ಯವನ್ನು ತಲುಪಿದ್ದು, ಮುಂದಿನ 48ಗಂಟೆಯಲ್ಲಿ ಉತ್ತರ ದಿಕ್ಕಿನಿಂದಲೂ ಗಾಜಾ ಪ್ರವೇಶಿಸುವ ಸಾಧ್ಯತೆ ಇದೆ, ಯುದ್ಧ ಆರಂಭವಾಗಿದೆ, ಅರ್ಧಕ್ಕೆ ನಿಲ್ಲಿಸುವ ಮಾತಿಲ್ಲ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.

ಗಾಜಾ ಹಾಗೂ ದಕ್ಷಿಣ ಗಾಜಾ ಎನ್ನುವ ರೀತಿ ವಿಭಜನೆ ಮಾಡಲಾಗಿದೆ, ಎರಡು ನಗರಗಳ ನಡುವೆ ಯಾವುದೇ ಸಂಪರ್ಕ ಇರುವುದಿಲ್ಲ, ಈ ಯುದ್ಧದಲ್ಲಿ ಇದು ಪ್ರಮುಖ ಘಟ್ಟವಾಗಿದೆ ಎಂದು ರಿಯರ್ ಅಡ್ಮಿರಲ್ ಡೆನಿಯಲ್ ಹಗರಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!