ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಡೀಪ್ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇಡೀ ಚಿತ್ರರಂಗ ನಟಿ ಪರ ನಿಂತಿದೆ.
ರಶ್ಮಿಕಾ ಪರವಾಗಿ ಸೀತಾ ರಾಮಂ ಬೆಡಗಿ ಮೃಣಾಲ್ ಠಾಕೂರ್ ನಿಂತಿದ್ದು, ವಿಡಿಯೋ ಮಾಡಿದವರಿಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.
ಜನರಲ್ಲಿ ಸ್ವಲ್ಪವೂ ನಾಚಿಕೆ, ಪಾಪಪ್ರಜ್ಞೆ ಉಳಿದೇ ಇಲ್ಲ ಎನಿಸುತ್ತದೆ.ಥ್ಯಾಂಕ್ಯೂ ರಶ್ಮಿಕಾ ಈ ರೀತಿ ವಿಡಿಯೋಗಳ ಬಗ್ಗೆ ನೀವು ಮಾತನಾಡ್ತಿದ್ದೀರಿ. ನಾವ್ಯಾರೂ ಪೂರ್ತಿಯಾಗಿ ವಿಡಿಯೋ ನೋಡಿರಲಿಲ್ಲ, ಆದರೆ ಈ ರೀತಿ ವಿಡಿಯೋ ಹರಿದಾಡುತ್ತಿದೆ ಎನ್ನುವ ವಿಷಯ ತಿಳಿದಿತ್ತು. ನಾವೆಲ್ಲಾ ಸುಮ್ಮನಾಗಿದ್ದೇವೆ, ಆದರೆ ನೀವು ಮಾತನಾಡಿದ್ದಕ್ಕೆ ನಮ್ಮ ಬೆಂಬಲ ಇದೆ. ಪ್ರತೀದಿನವೂ ಯಾರದ್ದೋ ದೇಹಕ್ಕೆ ನಟಿಯರ ಮುಖವನ್ನು ಹಾಕಿ ಫೋಟೊ, ವಿಡಿಯೋ ಮಾಡುತ್ತಲೇ ಇದ್ದಾರೆ.
ಯಾವುದೋ ಸಿನಿಮಾದ ಒಂದು ಕ್ಲಿಪ್ ಮಾತ್ರ ಇಟ್ಟುಕೊಂಡು ಅದನ್ನೇ ಝೂಮ್ ಮಾಡಿ ಇನ್ನೊಂದು ವಿಡಿಯೋ ತಯಾರು ಮಾಡ್ತಾರೆ, ಸಮಾಜ ಎತ್ತ ಸಾಗುತ್ತಿದೆ? ನಾವು ಹೀರೋಯಿನ್ಗಳು ಇರಬಹುದು, ಸೆಲೆಬ್ರಿಟಿ ಇರಬಹುದು, ಇದೆಲ್ಲಾ ಮುಗಿದಮೇಲೆ ನಾವು ಕೂಡ ಮನುಷ್ಯರೇ ಅಲ್ವಾ? ಯಾರೂ ಇನ್ನು ಸುಮ್ಮನಿರಬೇಡಿ, ಅನ್ಯಾಯದ ವಿರುದ್ಧ ಮಾತನಾಡಿ ಎಂದು ಮೃಣಾಲ್ ಹೇಳಿದ್ದಾರೆ.