ಹೊಸದಿಗಂತ ವರದಿ ಕಲಬುರಗಿ:
ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಕಿಂಗ್ ಪಿನ್ ಆರ್.ಡಿ.ಪಾಟೀಲ್‌ನ ಇಬ್ಬರು ಬಂಟರನ್ನು ಪೋಲಿಸರು ಬುಧವಾರ ಲಾಕ್ ಮಾಡಿದ್ದಾರೆ.
ಆರ್.ಡಿ.ಪಾಟೀಲ್ ಬಲಗೈ ಬಂಟರಾದ ರವಿ ಹಾಗೂ ಇನ್ನೋರ್ವ ಬಂಟನನ್ನು ಮಹಾರಾಷ್ಟ್ರ ರಾಜ್ಯದ ಸೋಲಾಪುರ ಬಳಿ, ಕಲಬುರಗಿಯ ವಿಶ್ವವಿದ್ಯಾಲಯ ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಇಬ್ಬರೇ ಆರ್.ಡಿ.ಪಾಟೀಲ್ ನನ್ನು ಸೋಲಾಪುರವರೆಗೂ ಡ್ರಾಪ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರದ ಸೋಲಾಪುರದಿಂದ ಆರ್.ಡಿ.ಪಾಟೀಲ್ ಒಬ್ಬನೇ ಬೇರೆಡೆ ಪರಾರಿಯಾಗಿದ್ದಾನೆ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು, ಸದ್ಯ ತಲೆ ಮರೆಸಿಕೊಂಡಿರುವ ಆರ್.ಡಿ.ಪಾಟೀಲ್‌ಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.