ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ವ್ಯರ್ಥ ಪ್ರಯತ್ನ ಮಾಡ್ತಿದೆ, ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವುದು ಆಗದಿರುವ ಮಾತು, ನಮ್ಮ ಎಲ್ಲಾ ಶಾಸಕರು ಗಟ್ಟಿಯಾಗಿದ್ದಾರೆ. ಆಪರೇಷನ್ ಕಮಲ ಇಲ್ಲಿ ಕೆಲಸ ಮಾಡೋದಿಲ್ಲ, ಯಾವ ಪ್ರಯತ್ನಕ್ಕೂ ನಮ್ಮ ಶಾಸಕರು ಬಗ್ಗೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗುಪ್ತಚರ ಮಾಹಿತಿ ವರದಿ ಏನೇ ಹೇಳಬಹುದು, ನಮ್ಮ ಶಾಸಕರು ಯಾರ ಸಂಪರ್ಕದಲ್ಲಿಯೂ ಇಲ್ಲ. ಒಂದು ಪಕ್ಷ ಯಾರೇ ಸಂಪರ್ಕ ಮಾಡಿದರೂ ನಮ್ಮ ಶಾಸಕರು ಗಟ್ಟಿಯಾಗಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ವಿಫಲವಾಗುತ್ತದೆ. ಕಾಂಗ್ರೆಸ್ ಶಾಸಕರು ಆಮಿಷಗಳಿಗೆ ಮಣಿಯುವಂತವರಲ್ಲ ಎಂದು ಹೇಳಿದ್ದಾರೆ.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋಗೋರು ಇರಲಿ, ಬಿಜೆಪಿ-ಜೆಡಿಎಸ್ನಿಂದ ನಮ್ಮ ಪಕ್ಷಕ್ಕೆ ಹಲವು ಶಾಸಕರು ಬರ್ತಿದ್ದಾರೆ ಎಂದು ಹೇಳಿ ಸಂಚಲನ ಮೂಡಿಸಿದ್ದಾರೆ.